ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಾಗಮಂಗಲ ತಾಲ್ಲೂಕು ಶಾಖೆ ವತಿಯಿಂದ ಮಹಿಳಾ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಶಿಕ್ಷಕರ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಪ್ರಕಾಶ್ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಸಮಾಜ
ದಲ್ಲಿ ಮಹಿಳೆಯರು ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಪ್ರಗತಿ ಸಾಧಿಸಿದ್ದಾರೆ ಎಂದರೇ ಅದಕ್ಕೆ ಕಾರಣ ಅಕ್ಷರದವ್ವ ಎಂದೇ ಖ್ಯಾತಿ ಪಡೆದಿರುವ ಸಾವಿತ್ರಿ ಬಾಯಿ ಪುಲೆರವರೇ ಕಾರಣ ಎಂದರು.
ವೈದಿಕಶಾಹಿಗಳ ದುರಾಡಳಿತ, ದಬ್ಬಾಳಿಕೆ ಹಿಂಸೆ ಎಲ್ಲವನ್ನು ಸಹಿಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಮುನ್ನುಡಿ ಬರೆದವರು ಸಾವಿತ್ರಿ ಬಾಯಿ ಫುಲೆ. ಹಾಗೆಯೇ ಸ್ವಚ್ಛವಾದ ಗಾಳಿ ಪಡೆದು ಅರೋಗ್ಯ ಯುತವಾಗಿ ಮಾನವರು ಬದುಕಿದ್ದಾರೆ ಎಂದರೇ ಸಾಲು ಸಾಲು ಮರಗಳು ಈ ಸಾಲು ಮರಗಳನ್ನ ನೆಡುವ ಮೂಲಕ ಮಾನವನ ಉಳಿವಿಗೆ ಕಾರಣರಾದವರೇ ಸಾಲುಮರದ ತಿಮ್ಮಕ್ಕನವರು. ಈ ರೀತಿಯಾಗಿ ಸಮಾಜದಲ್ಲಿ ಮಹಿಳೆಯರ ಪಾಲು ಯಥೇಚ್ಚವಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಜಿ.ಎನ್ ಅನುಸೂಯ ಮಾತನಾಡಿ, ಹೆಣ್ಣಿನ ಭಾವನೆಗಳನ್ನ ಅರಿಯಲು ಗಂಡು ಇಂದು ವಿಫಲನಾಗಿದ್ದಾನೆ, ಏಕೆಂದರೆ ಪುರುಷನಲ್ಲಿರುವ ಅಹಂ. ಸಮಾಜದಲ್ಲಿ ಪುರುಷರದೇ ಮೇಲುಗೈ ಎಂಬ ಅಹಂನಿಂದಾಗಿ ಹೆಣ್ಣಿನ ಭಾವನೆಗಳನ್ನ ಅರಿಯಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಅಷ್ಟೇ ಯಜಮಾನ ಗಂಡು. ಆದರೇ ಭೀಮ ಜರಸಂದರಂತವರನ್ನ ಹೆತ್ತವರು ಹೆಣ್ಣೇ ಹೊರತು ಪುರುಷನಲ್ಲ, ಇದರಿಂದ ನಾವು ಅರಿಯಬೇಕಾದದ್ದು ಸಮಾಜದ ಮುನ್ನುಡಿಯಲ್ಲಿ ಮಹಿಳೆಯ ಪಾತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ ಎಂದರು
ಅನುಸೂಯ ಹಾಗೂ ಎಂ ಬಿ ಪ್ರಕಾಶ್ ಅವರನ್ನು ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಜೆ ವೈ ಮಂಜುನಾಥ್, ಉಪಾಧ್ಯಕ್ಷ ವೈ ಸುರೇಶ್. ಮಧುಸೂದನ್, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.




