Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಸಾಮಾಜಿಕ ಪಿಡುಗು ತೊಡೆದು ಹಾಕಲು ಶ್ರಮಿಸಿ ; ನರೇಂದ್ರಸ್ವಾಮಿ

ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಮಹಿಳೆಯರು ಶ್ರಮಿಸಬೇಕೆಂದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಮುಟ್ಟಿನ ನೈರ್ಮಲ್ಯ ಹಾಗೂ ಗರ್ಭಕಂಠದ ಕ್ಯಾನ್ಸರ್” ಕುರಿತಾಗಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾದಿದ ಅವರು ಕಾರ್ಯಾಗಾರದಲ್ಲಿ ತಿಳಿದ ವಿಚಾರವನ್ನು ಸಾಮಾನ್ಯ ಮಹಿಳೆಯರಿಗೂ ಅರಿವು ಮೂಡಿಸಿ ಎಂದರು.

ಹೆಚ್.ಐ ವಿಗೆ ವ್ಯಾಕ್ಸಿನ್ ನೀಡಲು ನಮ್ಮ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ‌. ಇದಲ್ಲದೆ ಸ್ಕ್ರೀನಿಂಗ್ ಟೆಸ್ಟ್ ಮಾಡಲು ಮಳವಳ್ಳಿಯಿಂದಲೇ ಮೊದಲು ಪ್ರಾರಂಭಿಸುತ್ತಿದ್ದೇವೆ. ಇದರ ಬಗ್ಗೆ ನೀವು ಮಾತ್ರ ತಿಳಿದರೆ ಸಾಲದು ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳಿಗೂ ಸಂದೇಶವನ್ನು ತಲುಪಿಸಿ ಈಗಾಗಲೇ ರಾಜೀವ್ ಗಾಂಧಿ ದೇಶಕ್ಕೆ ನೀಡಿದ ತಂತ್ರಜ್ಞಾನದಲ್ಲಿ ಸದುಪಯೋಗ ಹಾಗೂ ದುರುಪಯೋಗ ಎರಡು ಇದೆ, ಸದುಪಯೋಗವನ್ನು ಮಾತ್ರ ಬಳಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಡಾ.ವಿನೂತ, ಡಾ.ಜ್ಯೋತಿ, ಡಾ. ಅನ್ನಪೂರ್ಣೇಶ್ವರಿ, ಡಾ.ಲಕ್ಷ್ಮಿ ಹಾಗೂ ಡಾ.ಮನೋಹರ್ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ