ಮಳವಳ್ಳಿ ತಾಲೂಕಿನ ಹಿಟ್ಟನಕೊಪ್ಪಲು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಸವೇಶ್ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿ ಆವರಣದಲ್ಲಿ 11 ನಿರ್ದೇಶಕರನ್ನು ಒಳಗೊಂಡ ಸದಸ್ಯರಲ್ಲಿ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಸವೇಶ್ ಮತ್ತು ಮೋಹನ್ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮಕೃಷ್ಣ ಘೋಷಿಸಿದರು. ಮೇಲ್ವಿಚಾರಕ ರಾಜಣ್ಣ ಹಾಜರಿದ್ದರು.
ಫಲಿತಾಂಶ ಘೋಷಣೆ ಯಾಗುತ್ತಿದ್ದಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು ಜೊತೆಗೆ ಹಲವಾರು ಕಾಂಗ್ರೆಸ್ ಮುಖಂಡರು ನೂತನ ಅಧ್ಯಕ್ಷ. ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಬಸವೇಶ್ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣರಾದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿ ತಮ್ಮ ಅವಿರೋಧ ಆಯ್ಕೆಗೆ ನೆರವಾದ ಎಲ್ಲಾ ನಿರ್ದೇಶಕರು ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದರು. ಸಂಘದ ರೈತರಿಗೆ ಸರ್ಕಾರದಿಂದ ಬರುವ ಸವ ಲತ್ತುಗಳನ್ನು ಅವರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲ್ಲಾ ನಿರ್ದೇಶಕರ ಜೊತೆಗೂಡಿ ಸಂಘದ ಉತ್ತುಂಗಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ನಿರ್ದೇಶಕರಾದ ಅನಿತಾ, ಕಾಂತರಾಜು, ಬೋರಲಿಂಗಗೌಡ, ಶಿವಕುಮಾರ್, ಮುಖಂಡರಾದ ಶಾಂತರಾಜು, ಪುಟ್ಟಸ್ವಾಮಿ, ಮಂಚಯ್ಯ, ನಾಗರಾಜು,ಚೇತನ್, ನಂಜಪ್ಪ ಕಾರ್ಯದರ್ಶಿ ಹೊನ್ನೇಗೌಡ ಸೇರಿದಂತೆ ಇತರರು ಇದ್ದರು.




