ಈ ಹಿಂದೆ ಬಿಜೆಪಿ ಮುಖಂಡರಾದ ಮುರುಗೇಶ್ ನಿರಾಣಿ ಹಾಗೂ ಶಶಿಕಲಲಾ ಜೊಲ್ಲೆ ವಿರುದ್ದವೂ ಪ್ರಾಸಿಕ್ಯೂಸನ್ ಅನುಮತಿ ಕೇಳಲಾಗಿತ್ತು, ಅವರಿಗೆ ಅನುಮತಿ ನೀಡದೇ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಕೊಡ್ತಿರೋದು ರಾಜಕೀಯ ಪ್ರೇರಿತ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಎಂ ವಿರುದ್ದ ಪ್ರಾಸಿಕ್ಯುಸನ್ ಗೆ ಅನುಮತಿ ನೀಡಿದ್ರೂ ಸರ್ಕಾರಕ್ಕೆ ಯಾಕೆ ತೊಂದರೆ ಆಗುತ್ತೆ ? ಮುಡಾ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ, ಕಾನೂನು ಬದ್ದವಾಗಿಯೇ ಅವರು ನಿವೇಶನ ಪಡೆದುಕೊಂಡಿದ್ದಾರೆ. ಇದೆಲ್ಲ ನಡೆದಿರೋದು ಬಿಜೆಪಿ ಅವದಿಯಲ್ಲಿ
ಹಾಗಾಗಿ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ತಿರುಗೇಟು ನೀಡಿದರು.
ಸಿಎಂ ಬದಲಾವಣೆಯಿಲ್ಲ
ಸಿ ಎಂ ಸಿದ್ದರಾಮಯ್ಯ ಅವರ ಬದಲಾವಣೆಯೂ ಇಲ್ಲ, ಅವರ ಸ್ಥಾನಕ್ಕೆ ಕುತ್ತು ಇಲ್ಲ ಎಂದ ಸಚಿವರು,
ಬಿಜೆಪಿ ಪಾದಯಾತ್ರೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಅವಧಿಯಲ್ಲಿನ ಹಗರಣಗಳ ಬಗೆಗೆ ನಾವು ಪ್ರಶ್ನೆ ಮಾಡ್ತಿವಿ, ಜೆಡಿಎಸ್ ನವರು ಅವರ ಜೊತೆಗೆ ಇದ್ದಾಗ ಬೆಂಬಲ ಕೊಡಬೇಕಲ್ವಾ ?
ಬೆಂಬಲ ಕೊಡದಿದ್ದರೆ ತೆಗಿತಾರೆ ಎಂಬ ಕಾರಣಕ್ಕೆ ಜೆಡಿಎಸ್ ನವರು ಬೆಂಬಲ ಕೊಟ್ಟಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಎದುರಿಸಬೇಕು, ಜೊತೆಗೆ ಕರ್ತವ್ಯವನ್ನ ನಿಬಾಯಿಸಬೇಕು. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡೋ ಕೆಲಸ ನಡೆಯುತ್ತಿದೆ. ಕತ್ತರಘಟ್ಟ ಗ್ರಾಮಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವೆನು ಎಂದರು.