Friday, November 20, 2026

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಸಂಸತ್ ಪ್ರವೇಶಿಸದಂತೆ ತಡೆದಿದ್ದು ಸಾವರ್ಕರ್ ; ಪ್ರಿಯಾಂಕ್ ಖರ್ಗೆ ಗುಡುಗು

ಬ್ರಿಟಿಷರಿಗೆ ಮಾಫಿ ಪತ್ರ ಬರೆದಿದ್ದ ಸಾವರ್ಕರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಪ್ರವೇಶಿಸದಂತೆ ತಡೆಯುವ ಸಂಚು ರೂಪಿಸಿದ್ದರು ಎನ್ನುವುದು ಸ್ವತಃ ಬಾಬಾ ಸಾಹೇಬರ ಕೈಬರಹದಲ್ಲೇ ದಾಖಲಾಗಿದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಗ್ ಖರ್ಗೆ ಗುಡುಗಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಶೋಷಿತರ ತಲೆಯ ಮೇಲೆ ಕಾಲಿಟ್ಟುಕೊಂಡು ಬಂದಿದ್ದ ಮನುವಾದಿಗಳಿಗೆ ಅಂಬೇಡ್ಕರ್ ರವರು ಪರಮ ಶತ್ರುವಾಗಿ ಕಂಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬಾಬಾ ಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಬಿಜೆಪಿಯ ಆಧಾರವಿಲ್ಲದ ಸುಳ್ಳು ನರೇಟಿವ್ ಅನ್ನು ಇಂದು ಸದನದಲ್ಲಿ ಚಾರಿತ್ರಿಕ ಸಾಕ್ಷಿಯನ್ನು ಮುಂದಿಟ್ಟು ಬಯಲು ಮಾಡಿದ್ದೇನೆ ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

“>

 

ರಾಜೀನಾಮೆ ಕೊಡುವ ಸವಾಲನ್ನು ಸ್ವೀಕರಿಸದ ಬಿಜೆಪಿಗರು ಸಾವರ್ಕರ್ ರವರ ‘sorry ಥಿಯರಿ’ಯನ್ನಾದರೂ ಪಾಲಿಸಲಿ, ಸದನಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ದೇಶದ ಜನತೆಗೆ ಕ್ಷಮೆ ಕೇಳಲಿ. ಸಾವರ್ಕರ್ ಪರವಾದ ವಕಾಲತ್ತು ವಹಿಸುವ ಬಿಜೆಪಿ, ಅಂಬೇಡ್ಕರ್ ರವರ ವಿರುದ್ಧದ ಸಾವರ್ಕರ್ ಸಂಚಿನ ಹೊಣೆಯನ್ನೂ ಹೊತ್ತುಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

“>

 

ಬಿಜೆಪಿಯವರು ಸಂವಿಧಾನಕ್ಕೆ ಜೈಕಾರ ಹಾಕುವುದಿಲ್ಲ

ಮನುಧರ್ಮಕ್ಕೆ ತಲೆಬಾಗುವ ಬಿಜೆಪಿಗರಿಗೆ ಬಸವ, ಬುದ್ಧರು ಸಹ್ಯವಾಗುವುದಿಲ್ಲ. ಆರ್ಎಸ್ಎಸ್ ಗೆ ಜೈಕಾರ ಹಾಕುವ ಬಿಜೆಪಿಯವರು ಸಂವಿಧಾನಕ್ಕೆ ಜೈಕಾರ ಹಾಕುವುದಿಲ್ಲ. ಕೇಸರಿ ಶಾಲು ಹಾಕುವ ಬಿಜೆಪಿಗರಿಗೆ ರಾಷ್ಟ್ರಧ್ವಜವನ್ನು ಕಂಡರೆ ಆಗುವುದಿಲ್ಲ, ಸದನದಲ್ಲಿ ರಾಷ್ಟಧ್ವಜವನ್ನು ಕಂಡ ತಕ್ಷಣ ಬಿಜೆಪಿಯವರು ಹಾಕು ಕಂಡಂತೆ ಹೌಹಾರಿದರು, ರಾಷ್ಟ್ರಧ್ವಜದ ಮೇಲೆ ಆರ್.ಎಸ್.ಎಸ್ ಗೆ ಇರುವ ದ್ವೇಷವು ಬಿಜೆಪಿಗರಲ್ಲೂ ಬಳುವಳಿಯಾಗಿ ಬಂದಿದೆಯೇ? ಎಂದು ಪ್ರಶ್ನೆ ಮಾಡಿದರು.

ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರದ ಸಂವಿಧಾನಗಳನ್ನು ತಿರಸ್ಕಾರದಿಂದ ನೋಡುವ ಇವರು  ರಾಷ್ಟೀಯವಾದಿಗಳಂತೆ, ಇದು ಯಾವ ಸೀಮೆಯ ರಾಷ್ಟ್ರೀಯವಾದವೋ ಏನೋ! ದೇಶದ ಪರಿಕಲ್ಪನೆಯನ್ನು ಹುಟ್ಟುಹಾಕಿ, ಜನರಲ್ಲಿ ದೇಶಭಕ್ತಿಯನ್ನು ತುಂಬಿ ಸ್ವತಂತ್ರಕ್ಕೆ ಹೋರಾಡಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯವರು ಪಾಠ ಮಾಡುವುದು ಮಿಂಚು ಹುಳುವೊಂದು ಸೂರ್ಯನ ಮುಂದೆ ನಿಂತು ನನ್ನಿಂದಲೇ ಬೆಳಕಾಯಿತು ಎನ್ನುವಂತಿದೆ! ಎಂದು ಅವರು ಲೇವಡಿ ಮಾಡಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ