Friday, November 20, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಬಂದ್ | ಮದ್ದೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬೆಂಬಲ

ವರದಿ : ನ.ಲಿ.ಕೃಷ್ಣ

ಮರಾಠಿ ಪುಂಡರ ಹಾವಳಿ ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಮಾ.22ರ ಕರ್ನಾಟಕ ಬಂದ್ ಗೆ ಮದ್ದೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಚನ್ನಸಂದ್ರ ಮಹದೇವು, ಮ.ನ.ಪ್ರಸನ್ನ ಕುಮಾರ ಹಾಗೂ ದೇಶಹಳ್ಳಿ ಬೋರಣ್ಣ ಅವರು, ಕನ್ನಡ ಚಳವಳಿ ಹೋರಾಟಗಾಋ ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್ ತಮ್ಮ ಬೆಂಬಲವಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಇಂತಹ ಘಟನೆಗಳನ್ನು ಪೋಷಿಸಿಸುತ್ತಿರುವ ಸಂಘಟನೆಗಳ ಮೇಲೆ‌ ಕಾನೂನು ಕ್ರಮ‌ ಜರುಗಿಸಬೇಕೆಂದರು.

ಮದ್ಧೂರು ಪಟ್ಟಣದಲ್ಲಿ ನಾಳೆ ಎಲ್ಲ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲಿಸಲು‌ ವರ್ತಕರಲ್ಲಿ ಮನವಿ ಮಾಡಲಾಗಿದೆ. ಮದ್ದೂರು ತಾಲ್ಲೂಕಿನ ಎಲ್ಲಾ ಕನ್ನಡದ ಮನಸ್ಸುಗಳು ಈ ಬಂದ್ ನಲ್ಲಿ ಸ್ವಂಪ್ರೇರಿತರಾಗಿ ಭಾಗವಹಿಸುವ ಮೂಲಕ ಕನ್ನಡದ ಆಸ್ಮಿತೆಯನ್ನು ಎತ್ತಿ ಹಿಡಿದು ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

ಮದ್ದೂರು ಬಂದ್ ಗೆ ತೆಂಗು ಬೆಳೆಗಾರರ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ದಲಿತ ಸಂಘ, ಕ್ರಾಂತಿವೀರ ಸಂಗೊಳ್ಳಿ‌ರಾಯಣ್ಣ, ಆಟೊ ಚಾಲಕರ ಸಂಘ, ಜಾಮಿಯಾ ಷಾದಿ ಕಮಿಟಿ, ಜೈನ ಹಾಗೂ ಪಟೇಲ್ ಸಮುದಾಯ ವರ್ತಕರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ