Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಪಿ.ಎಲ್.ಡಿ ಬ್ಯಾಂಕ್ ಮಂಡಳಿ ಚುನಾವಣೆ ಫಲಿತಾಂಶ ಪ್ರಕಟ

ಕಳೆದ ಜ.25 ರಂದು ನಡೆದಿದ್ದ ಮಂಡ್ಯ ತಾಲ್ಲೂಕು ಪಿಎಲ್.ಡಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶವು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಮತ ಎಣಿಕೆ ನಡೆದು
ಫಲಿತಾಂಶ ಹೊರಬಿದ್ದಿದೆ.

ಚನಾವಣೆ ನಡೆದಿದ್ದ 7 ಸ್ಥಾನಗಳ ಮತ ಎಣಿಕೆ ಹೈಕೋರ್ಟ್‌ ನಿರ್ದೇಶನದಂತೆ ಶುಕ್ರವಾರ ನಡೆದಿದ್ದು, ಎರಡು ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಜಯ, ಐದು ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿಗರು ಜಯಗಳಿಸಿದ್ದಾರೆ.

ಕೊತ್ತತ್ತಿ 2ನೇ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಉರಮಾರ ಕಸಲಗೆರೆ ಮರೀಗೌಡ, 3 ನೇ ಕ್ಷೇತ್ರ ತಗ್ಗಹಳ್ಳಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಟಿ.ಬಿ. ಶಿವಲಿಂಗೇಗೌಡ, 6ನೇ ಕ್ಷೇತ್ರ ಹಲ್ಲೇಗೆರೆ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಸಿ.ಎ.ಅರವಿಂದ್, 7ನೇ ಕ್ಷೇತ್ರ ಶಿವಳ್ಳಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಿಂದ ಶ್ರೇಯಸ್ ವೈ.ಗೌಡ, 8ನೇ ಕ್ಷೇತ್ರ ತಾಲೂಕಿನಾದ್ಯಂತ ಸಾಲ ಪಡೆಯದವರ ಸಾಮಾನ್ಯ ಮತ ಕ್ಷೇತ್ರದಿಂದ ಬೇಲೂರು ಸೋಮಶೇಖರ್, 11ನೇ ಕ್ಷೇತ್ರ ಮುತ್ತೇಗೆರೆ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಮತ ಕ್ಷೇತ್ರದಿಂದ ಜವರಯ್ಯ, 14ನೇ ಕ್ಷೇತ್ರ ಕೆರಗೋಡು ಸಾಲಗಾರರ ಮಹಿಳಾ ಮೀಸಲು ಮತ ಕ್ಷೇತ್ರದಿಂದ ಎಸ್. ಶಿಲ್ಪ ರಘುನಂದನ್ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿ ಎಂ.ಎಸ್.ವೀಣಾ ತಿಳಿಸಿದರು.

ಜ.25ರಂದು ಚುನಾವಣೆ ನಡೆದಿತ್ತು. ಆದರೆ ಅರ್ಹ ಮತ್ತು ಅನರ್ಹ ಮತದಾರರ ಗೊಂದಲದಿಂದ ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿತ್ತು. ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್‌ ಎರಡೂ ವರ್ಗಗಳ ಮತಗಳನ್ನು ಪರಿಗಣಿಸುವಂತೆ ಸೂಚನೆ ನೀಡಿದ ಮೇರೆಗೆ ಶುಕ್ರವಾರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಚುನಾಯಿತ ನಿರ್ದೇಶಕರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.

7 ಜನ ಅವಿರೋಧ ಆಯ್ಕೆ

ಈ ಪೈಕಿ ಹೆಚ್.ಸಿ.ಶಿವಲಿಂಗೇಗೌಡ, ಉಮ್ಮಡಹಳ್ಳಿ ಶಿವಪ್ಪ, ಬಿ.ಎಲ್. ಬೋರೇಗೌಡ, ಯೋಗೇಶ್ ಎಂ, ನಿಂಗಮ್ಮ, ದಿವ್ಯಶ್ರೀ, ಮಮತಾ ಅವಿರೋಧವಾಗಿ ಆಯ್ಕೆ ಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ