ಅಗ್ನಿಬನ್ನಿರಾಯರ ತತ್ವ ಸಿದ್ಧಾಂತ ಆಚಾರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್ ಸಂದೇಶ್ ಹೇಳಿದರು.
ಮಂಡ್ಯ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ನಡೆದ ಶ್ರೀಅಗ್ನಿಬನ್ನಿರಾಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಗ್ನಿಬನ್ನಿರಾಯರ ಆಶಯದಂತೆ ನಾವೆಲ್ಲರೂ ಸಹ ಬದುಕು ನಡೆಸುವ ಬಗ್ಗೆ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಶಿಕ್ಷಣ, ರಾಜಕೀಯ, ಉದ್ಯೋಗಗಳಲ್ಲಿ ಸಿಗಬೇಕಾದ ಅವಕಾಶಗಳ ಕುರಿತು ಚರ್ಚೆ ಆಗಬೇಕಿದೆ, ಇಲ್ಲಿ ಯಾರೂ ಮೇಲು ಅಲ್ಲ ಕೀಳು ಅಲ್ಲ, ಭಾರತದ ಸಂವಿಧಾನದ ಪ್ರಕಾರ ಎಲ್ಲಾ ಪ್ರಜೆಗೂ ಸಮಾನ ಗೌರವ, ಶಿಕ್ಷಣ ದೊರೆಯುತ್ತಿದೆ, ಯಾರು ಸಹ ನಾವು ಕೀಳು ಎಂಬ ಭಾವನೆ ಇಟ್ಟುಕೊಳ್ಳಬಾರದು ಎಂದು ಹೇಳಿದರು.
ಸಮಾಜವನ್ನು ಬೆಳಗಿಸುವ ಹೊಣೆ ನಮ್ಮೆಲ್ಲರದ್ದು, ನಾನು ಹುಟ್ಟಿರುವ ಸಮುದಾಯಕ್ಕೆ ಉತ್ತಮ ಕೊಡುಗೆ ನೀಡಬೇಕು, ಸಮುದಾಯದ ಜೊತೆಗೆ ನಮ್ಮ ಸಮಾಜಕ್ಕೂ ಮಾದರಿಯಾಗಿ ನಿಲ್ಲಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಎಂ.ಆರ್. ಉಮೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ ನಂದೀಶ್, ನಗರಸಭಾ ಸದಸ್ಯ ಶ್ರೀಧರ್, ನಾಗರತ್ನ ಉಪ್ಪಾರ್, ಮಂಡ್ಯ ಜಿಲ್ಲಾ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಗುರುಮೂರ್ತಿ, ರಮೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.




