ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಏಕಾಏಕಿ 50 ರೂ. ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಬೆಲೆ ಏರಿಕೆ ಬರೆ ಎಳೆದಿದೆ.
ಎಲ್ಲಾ ರೀತಿಯ ಎಲ್ ಪಿಜಿ ಗ್ರಾಹಕರಿಗೆ ದರ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಅಥವಾ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಬೆಲೆ ಏರಿಕೆ ಸಬ್ಸಿಡಿ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಅನ್ವಯವಾಗಲಿದೆ. “ಉಜ್ವಲ ಅಡಿಯಲ್ಲಿ 14.2 ಕೆಜಿ ಎಲ್ಪಿಜಿ ಬೆಲೆ 500 ರಿಂದ 550 ಕ್ಕೆ ಮತ್ತು ಉಜ್ವಲ ಯೋಜನೆಯ ಹೊರತಾದ ಬಳಕೆದಾರರಿಗೆ 803ರಿಂದ 853 ಕ್ಕೆ ಹೆಚ್ಚಾಗಲಿದೆ” ಎಂದು ಪುರಿ ತಿಳಿಸಿದ್ದಾರೆ.




