ಮಳವಳ್ಳಿ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಸ್ಎಸ್ಎಲ್‌ಡಿ)ಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ದೊಡ್ಡಮಾದೇಗೌಡ ಹಾಗೂ ಉಪಾಧ್ಯಕ್ಷರಾಗಿ ವೀರೇಶ್ ಆಯ್ಕೆಯಾಗಿದ್ದಾರೆ.
ಮಳವಳ್ಳಿ ಪಟ್ಟಣದ ಪಿಎಸ್ಎಸ್ಎಲ್‌ಡಿ ಬ್ಯಾಂಕ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 14 ಮಂದಿ ನಿರ್ದೇಶಕರು ಹಾಗೂ ಓರ್ವ ನಾಮ ನಿರ್ದೇಶಕರನ್ನೊಳಗೊಂಡ ಒಟ್ಟು 15 ಜನರಿಂದ ಮತದಾನ ನಡೆಯಿತು.
ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್ ಬೆಂಬಲಿತ ದೊಡ್ಡಮಾದೇಗೌಡ ಮತ್ತು ಕಾಂಗ್ರೆಸ್ ಬೆಂಬಲಿತ ಮಹದೇವಸ್ವಾಮಿ ಮಧ್ಯೆ ಸ್ಪರ್ಧೆ ನಡೆದಿದ್ದು, ದೊಡ್ಡಮಾದೇಗೌಡ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮಹದೇವಸ್ವಾಮಿ 6 ಮತಗಳನ್ನು ಪಡೆದು ಸೋಲುಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ವೀರೇಶ್ ಮತ್ತು ಕಾಂಗ್ರೆಸ್ ಬೆಂಬಲಿತ ಶ್ವೇತಾ ನಡುವೆ ಸ್ಪರ್ಧೆ ನಡೆಯಿತು. ವೀರೇಶ್ ಅವರಿಗೆ 9 ಮತಗಳು ಪಡೆದರು. ಶ್ವೇತಾಕೆ 6 ಮತಗಳು ಪರಾಜಿತರಾದರು. ಈ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಎರಡೂ ಸ್ಥಾನಗಳಲ್ಲೂ ಜಯ ಸಾಧಿಸಿದ್ದಾರೆ.
ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ ಚುನಾವಣಾಧಿಕಾರಿ ಶ್ರೀನಿವಾಸ್, ಚುನಾವಣೆ ಪ್ರಜಾಪ್ರಭುತ್ವದ ಆದರ್ಶಗಳಿಗೆ ಅನುಗುಣವಾಗಿ ನಿಶ್ಚಲವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ದೊಡ್ಡಮಾದೇಗೌಡ ಅವರು, “ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಈ ಬ್ಯಾಂಕ್‌ನ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತೇನೆ. ರೈತರು, ಗ್ರಾಮೀಣ ಜನತೆಯ ಹಿತಕ್ಕಾಗಿ ಸುಧಾರಿತ ಯೋಜನೆಗಳನ್ನು ರೂಪಿಸಿ, ಅನುಷ್ಟಾನ ಮಾಡುವೆ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ರವಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವಿಶ್ವನಾಥ, ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ಮುಖಂಡರಾದ ಮಾಯಣ್ಣ, ಹನುಮಂತ, ತಮ್ಮಡಹಳ್ಳಿ ಈರಪ್ಪ, ಹಿಟ್ಟನಕೊಪ್ಪಲು ಮುತ್ತುರಾಜ್, ಕೆಂಪ್ಲಿಂಗ (ಲೋಕೇಶ್), ಮನು ಸೇರಿದಂತೆ ಹಲವರು ಉಪಸ್ಥಿತರಿದ್ದರು.




