ಮಂಡ್ಯ ತಾಲ್ಲೂಕಿನ ಭೂ ಅಭಿವೃದ್ದಿ (ಪಿಎಲ್’ಡಿ) ಬ್ಯಾಂಕಿನ ಆಡಳಿತವನ್ನು ಕಾಂಗ್ರೆಸ್ ಪಕ್ಷವು ತನ್ನದಾಗಿಸಿಕೊಂಡಿದೆ.
14 ಚುನಾಯಿತ ಹಾಗೂ ಓರ್ವ ನಾಮ ನಿರ್ದೇಶಿತ ನಿರ್ದೇಶಕ ಸೇರಿದಂತೆ 15 ಸದಸ್ಯ ಬಲವುಳ್ಳ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಬೆಂಬಲಿತರಾದ ಊರಮಾರಕಸಲಗೆರೆ ಗ್ರಾಮದ ಮರೀಗೌಡ (ಅಧ್ಯಕ್ಷ) ಆಲಕೆರೆ ಗ್ರಾಮದ ನಾಮನಿರ್ದೇಶಿತ ನಿರ್ದೇಶಕ ಕೃಷ್ಣೇಗೌಡ (ಉಪಾಧ್ಯಕ್ಷ) ತಲಾ 8 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು.
ಕಾಂಗ್ರೆಸ್ ಬೆಂಬಲಿತರ ಪರವಾಗಿ ಮರೀಗೌಡ, ಕೃಷ್ಣೇಗೌಡ, ಯು.ಸಿ.ಶಿವಕುಮಾರ್, ಎಚ್.ಸಿ.ಶಿವಲಿಂಗೇಗೌಡ, ಬೇಲೂರು ಸೋಮಶೇಖರ್, ಬೋರೇಗೌಡ, ಎಂ.ಯೋಗೇಶ್, ಲಿಂಗಮ್ಮ ಮತ ಚಲಾಯಿಸಿದರು.
ಜೆಡಿಎಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ಬಿ.ಶಿವಲಿಂಗೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದಿವ್ಯ ತಲಾ 7 ಮತ ಪಡೆದು ಪರಾಭವಗೊಂಡರು. ಇವರ ಪರವಾಗಿ ಜವರಯ್ಯ, ಶಿಲ್ಪ ರಘನಂದನ್, ಮಮತಾ, ಶ್ರೇಯಸ್ ಗೌಡ ಮತ್ತು ಅರವಿಂದ್ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ತಾ.ಪಂ. ಇಓ ವೀಣಾ ಕಾರ್ಯ ನಿರ್ವಹಿಸಿದರು.
ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಯು.ಸಿ.ಶಿವಕುಮಾರ್, ಮಾಜಿ ಅಧ್ಯಕ್ಷರಾದ ಬೇಲೂರು ಸೋಮಶೇಖರ್, ಎಚ್.ಸಿ.ಶಿವಲಿಂಗೇಗೌಡರ ತಂತ್ರಗಾರಿಕೆಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ತಾ.ಪಂ. ಇಓ ವೀಣಾ ಕಾರ್ಯ ನಿರ್ವಹಿಸಿದರು.
10 ಲಕ್ಷ ರೂ.ಅನುದಾನ
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಅವರು, ಪಕ್ಷದ ತೆಕ್ಕೆಗೆ ಪಿಎಲ್’ಡಿ ಬ್ಯಾಂಕ್ ಆಡಳಿತ ಮಂಡಳಿ ಒಲಿದು ಬಂದಿದೆ. ಬ್ಯಾಂಕ್ ಅಭಿವೃದ್ದಿಗೆ 10 ಲಕ್ಷ ರೂ.ಅನುದಾನ ನೀಡಲಾಗುವುದು. ಹಂತ ಹಂತವಾಗಿ ಆಸಕ್ತ ನಿರ್ದೇಶಕರನ್ನು ವರಿಷ್ಠ ಹುದ್ದೆಗೇರಿಸ ಲಾಗುವುದು. ಎಲ್ಲ ನಿರ್ದೇಶಕರು ಬ್ಯಾಂಕಿನ ಅಭಿವೃದ್ದಿಗೆ ಒಟ್ಟಾಗಿ ಶ್ರಮಿಸಬೇಕೆಂದು ಕರೆ ನೀಡಿದರು.




