Friday, November 20, 2026

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯಾರಂಭ

ಮಂಡ್ಯ ಜಿಲ್ಲಾದ್ಯಂತ ಮತದಾರ ನೊಂದಣಿ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಶಿಕ್ಷಕರಿಗೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಸಂಬಂಧ ಪಿಯು ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ಡಿಗ್ರಿ ಕಾಲೇಜ್ ಹಾಗೂ ಬೇರೆ ಬೇರೆ ಕಾಲೇಜು ಮತ್ತು ಹೈ ಸ್ಕೂಲ್ ಬಿಇಓ, ಡಿಡಿಪಿಐ, ಡಿಡಿಪಿಯು ಇತರೆ ಸಂಸ್ಥೆಗಳ ಮುಖ್ಯಸ್ಥರನ್ನು ಸಭೆಗೆ ಕರೆದು ಅವರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವಂತಹ ಶಿಕ್ಷಕರ ನೋಂದಣಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾಂಶುಪಾಲರ ಸಭೆ ನಡೆಸಿ ಅವರು ಮಾತನಾಡಿದರು.

ಎಲ್ಲರೂ ಕೂಡ ತಮ್ಮ ತಮ್ಮ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವಂತಹ ಅರ್ಹ ಶಿಕ್ಷಕ ಮತದಾರರ ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವಂತೆ ತಿಳಿಸಿದರು. ನೇರವಾಗಿ ಅರ್ಹ ಮತದಾರರು ತಮ್ಮ ವಾಸ ಸ್ಥಳ ಇರುವಂತಹ ತಹಶೀಲ್ದಾರ್ ರವರ ಕಚೇರಿಗೆ ಅರ್ಜಿಗಳನ್ನು ಕೊಟ್ಟರೆ ಅವರು ನಿಮಗೆ ಸ್ವೀಕೃತಿಯನ್ನು ಕೊಡುತ್ತಾರೆ. ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆಯ ದಿನಾಂಕವಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಡಿಡಿಪಿಐ ಶಿವರಾಮೇಗೌಡ, ಮಂಡ್ಯ ವಿಶ್ವವಿದ್ಯಾನಿಲಯದ ಕುಲಸಚಿವ ಚಂದ್ರಯ್ಯ ಆರ್, ಬಿಇಓಗಳಾದ ಮಹದೇವ, ಸೌಭಾಗ್ಯ, ಸರ್ಕಾರಿ ಮಹಿಳಾ ವಿದ್ಯಾನಿಲಯದ ಪ್ರಾಂಶುಪಾಲರಾದ ಆರ್ ದಶರಥ ಸೇರಿದಂತೆ ಇನ್ನಿತರ ಪ್ರಾಂಶುಪಾಲರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ