Tuesday, November 17, 2026

ಪ್ರಾಯೋಗಿಕ ಆವೃತ್ತಿ

ಪ್ರಬುದ್ಧಭಾರತಕ್ಕೆ ಪುರೋಹಿತ ಶಾಹಿ, ಬಂಡವಾಳ ಶಾಹಿಗಳು ಅಡ್ಡಿ

ವೆಂಕಟಗಿರಿಯಯ್ಯ, ರಾಜ್ಯಾಧ್ಯಕ್ಷರು, ಕದಸಂಸ 

ಭಾರತದ ಭಾಗ್ಯವಿಧಾತ ಡಾ.ಭೀಮ್ ರಾವ್ ರಾಮ್ ಜೀ ಅಂಬೇಡ್ಕರ್ ಅವರ 134ನೇ ವರ್ಷದ ಜನ್ಮದಿನದ ಶುಭಾಶಯಗಳು.

ಆತ್ಮೀಯ ಭಾರತದ ಮೂಲನಿವಾಸಿ ಮಹಾಜನರೇ.. ಈ ನಮ್ಮ ಭಾರತವನ್ನು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಬಯಸಿದಂತೆ “ಪ್ರಬುದ್ಧ ಭಾರತ”ವನ್ನಾಗಿಸಲು ಪುರೋಹಿತ ಶಾಹಿ, ಬಂಡವಾಳ ಶಾಹಿ, ಅಧಿಕಾರ ಶಾಹಿ ಪ್ರಭುತ್ವ ಅಡ್ಡಿಯಾಗುತ್ತಲೇಇದೆ.

ಪರಿಣಾಮವಾಗಿ ಸದೃಡಗೊಳ್ಳಬೇಕಿದ್ದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ವ್ಯವಸ್ಥೆಯು ಅಸ್ಥಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಮೂಲಕ ಭಾರತ ಸಂವಿಧಾನ ಭಾರತ ರಾಜಕೀಯ ವ್ಯವಸ್ಥೆಯಲ್ಲಿ ಮೂಲೆಯಲ್ಲಿ ಬಿಸಾಕಲಾಗಿರುವುದು ಆತಂಕಕಾರಿಯಾಗಿದೆ. ಭಾರತದ ಸಂವಿಧಾನದ ಬದಲಾಗಿ ಮನುಸ್ಮೃತಿಯೇ… ಆಡಳಿತ ಮಾಡುತ್ತಿರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮನುವಾದಿ ನೀತಿಯೇ ಕಾರಣವಾಗಿದ್ದು, ಈ ಮನುವಾದಿಗಳು ಸ್ವಾತಂತ್ರ್ಯ ನಂತರವೂ ಮನುಸ್ಮೃತಿಯನ್ನು ಆರಾಧಿಸಿ, ಅನುಸರಿಸುತ್ತಿರುವುದೇ..ಕಾರಣವಾಗಿದೆ.

ಭಾರತೀಯ ಮೂಲನಿವಾಸಿಗಳಾದ ದಲಿತ, ಹಿಂದುಳಿದ ವರ್ಗ, ರೈತ, ಕಾರ್ಮಿಕ ಅಲ್ಪಸಂಖ್ಯಾತ ಬಹುಜನರು ಭಾರತದ ಪ್ರಗತಿಗಾಗಿ ಸಂವಿಧಾನ ಜಾರಿ ಮಾಡಿ ಎಂದು ಬೇಡುವುದನ್ನು ಬಿಟ್ಟು, ರಾಜಕೀಯ ಶಿಕ್ಷಿತರಾಗಿ ಭಾರತ ಸಂವಿಧಾನ ಜಾರಿ ಮಾಡುವ ಜನಾಂದೋಲಕ್ಕೆ ಸಿದ್ದರಾಗುವ ಸಂಕಲ್ಪಕ್ಕೆ ಧೀಕ್ಷಾಬದ್ಧರಾಗುವ ಮೂಲಕ 134ನೇ ವರ್ಷದ ಡಾ.ಅಂಬೇಡ್ಕರ್ ರವರ ಜನ್ಮ ದಿನಕ್ಕೆ ಮಹತ್ವವನ್ನು ತಂದು ಕೊಡಲು ಸರ್ವರೂ ಸಿದ್ದರಾಗಬೇಕಾಗಿದೆ.

ಭಾರತದ ಚರಿತ್ರಯಲ್ಲಿ ಗಾಂಧಿ ಕಾಂಗ್ರೆಸ್ ಮತ್ತು ಅಂಬೇಡ್ಕರ್ ನಡುವೆ ನಡೆದ ರಾಜಕೀಯ ಒಪ್ಪಂದಗಳನ್ನು ಭಾರತೀಯ ಬಹುಜನರು ತಿರಸ್ಕರಿಸದ ಹೊರತು “ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು” ನೀತಿ ಜಾರಿಯಾಗದು. ಬ್ರಿಟೀಷ್ ಭಾರತ ಸರ್ಕಾರದ ಕೊಮುವಾರು ತೀರ್ಪುಗಳಾಗಲಿ, ಪೂನಾ ಒಡಂಬಡಿಕೆಯನ್ನಾಗಲಿ ಈ ಕಾಂಗ್ರೆಸ್ -ಬಿಜೆಪಿಯ ಜನ ಗೌರವಿಸದಿರುವಾಗ ತುಳಿತಕ್ಕೊಳಗಾದ ನಾವ್ಯಾಕೆ ಗೌರವಿಸಬೇಕಾಗಿದೆ ಎಂಬ ಪ್ರಶ್ನೆ ಎದುರಾಗುತ್ತಿದೆ.

ಐರ್ಲ್ಯಾಂಡ್ ದೇಶದಲ್ಲಿ ಸಂವಿಧಾನ ರಚಿಸುವಾಗ ರೆಡ್ಮಂಡ್ ಮತ್ತು ಆಲ್ ಸ್ಟರ್ ಸಮುದಾಯಗಳ ನಡುವೆ ನಡೆದ ರಾಜಕೀಯ ಒಡಂಬಡಿಕೆಯಂತೆ “ಸರ್ವರಿಗೂ ಸಮಾನ ಅಧಿಕಾರ” ನೀತಿಯನ್ನು ಭಾರತದಲ್ಲೂ ಸ್ಥಾಪಿಸಲು ಮುಂದಾಗುವ ಮೂಲಕ ಡಾ.ಅಂಬೇಡ್ಕರ್ ರವರ ಪ್ರಬುದ್ಧ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ಭಾರತೀಯ ಮೂಲನಿವಾಸಿಗಳು ಕಠಿಣ ಸಂಕಲ್ಪಿತರಾಗಬೇಕೆಂದು ಆಶಿಸುತ್ತೇನೆ. ಇದೇ ನನ್ಙ ಸಂದೇಶವು ಕೂಡ ಆಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ