Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಂಬೇಡ್ಕರ್ ಜಯಂತಿಯಂದು ಕಾರ್ಮಿಕರಿಂದ ದುಡಿಸಿಕೊಂಡ ಕಂಪನಿಗಳು!

ಏಪ್ರಿಲ್ 14ರ ಅಂಬೇಡ್ಕರ್ ಜನ್ಮದಿನಕ್ಕೆ ಕೇಂದ್ರ ಸರ್ಕಾರವೇ ಸಾರ್ವತ್ರಿಕ ರಜೆ ಘೋಷಿಸಿದ್ದರೂ ಕಾರ್ಮಿಕರಿಂದ ದುಡಿಮೆ ಮಾಡಿಸಿಕೊಂಡ ಗೆಜ್ಜಲಗೆರೆ ಕೈಗಾರಿಕೆಗಳ ವಿರುದ್ದ ಕನ್ನಡ ಪರ ಸಂಘಟನೆಗಳು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ವಲಯದ ಕಾರ್ಖಾನೆಗಳು ರಜೆ ನೀಡದೆ ನಿಯಮ ಮೀರಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಕಂಡು ಬಂದಿತು.

ಈ ಸಂಧರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕರುನಾಡ ಸೇವಕರು ಸಂಘಟನೆ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ, ಮುದ್ದೇಗೌಡ, ದ್ರಾವಿಡ ಕನ್ನಡ ಸಂಘಟನೆ ಅಭೀಗೌಡ ಸೇರಿದಂತೆ ಹಲವರು ಸಾಯಿ ಎಕ್ಸ್ ಪೋರ್ಟ್ ಕಂಪನಿ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಎಂ.ಬಿ.ನಾಗಣ್ಣಗೌಡ, ಇಡೀ ದೇಶಕ್ಕೆ ರಜೆ ಘೋಷಿಸಲಾಗಿದೆ. ಗೆಜ್ಜಲಗೆರೆ ಕೈಗಾರಿಕಾ ವಲಯ ರಿಪಬ್ಲಿಕ್ ಇಂಡಿಯಾದಲ್ಲಿ ಇದೆಯೋ… ?ಇಲ್ಲವೆ ಜೆಕ್ ರಿಪಬ್ಲಿಕ್ ನಲ್ಲಿ ಇದೆಯೋ ? ನಿಯಮ ಮೀರಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಕಂಪನಿ ಹಾಗೂ ಇದಕ್ಕೆ ಸಹಕಾರ ನೀಡಿರುವ ಕಾರ್ಮಿಕ ಇಲಾಖೆಯ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಂಪನಿ ಪ್ರತಿನಿಧಿ ರಜೆ ಘೋಷಣೆ ಬಗ್ಗೆ ಕಾರ್ಮಿಕ ಇಲಾಖೆಯಿಂದ ನಮಗೆ ಯಾವುದೆ ಸೂಚನೆ ಬಂದಿಲ್ಲ. ಕಾರ್ಮಿಕ ಇಲಾಖೆ ಸೂಚನೆ ಕೊಟ್ಟರೆ ತಾವು ಪಾಲಿಸುವುದಾಗಿ ಹೇಳಿದ್ದು, ಸಂಘಟನೆಗಳ ಮುಖಂಡರನ್ನು ಕೆರಳಿಸಿತು. ಕಡೆಗೆ ಇದೇ ಉತ್ತರವನ್ನು ಲಿಖಿತವಾಗಿ ಬರೆದುಕೊಡುವಂತೆ ಮುಖಂಡರು ಒತ್ತಾಯಿಸಿದರು.

ಅಂತಿಮವಾಗಿ ಕಂಪನಿ ಪ್ರತಿನಿಧಿಗೆ ಆಗ್ರಹ ಪತ್ರ ನೀಡಿ ರಜೆ ನೀಡದಿರುವ ಕುರಿತು ಅಗತ್ಯ ವಿವರಣೆ ನೀಡುವಂತೆ ಕೇಳಲಾಯಿತು. ಆರಂಭದಲ್ಲಿ ಸೋಷಿಯಲ್ ಮೀಡಿಯಾ ಲೈವ್ ಮಾಡುವುದಕ್ಕೆ ವಿರೋಧ ತೋರಿದ ಕಂಪನಿ ಪ್ರತಿನಿಧಿಗಳು ಮುಖಂಡರ ಆಗ್ರಹಕ್ಕೆ ತಣ್ಣಗಾದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ