Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಆಲಕೆರೆಯಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ಅಗ್ನಿಕುಂಡ ಮಹೋತ್ಸವ

ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಆಲಕೆರೆ ಗ್ರಾಮದಲ್ಲಿ ಮೇ 5 ರಿಂದ 8 ರವರೆಗೆ 24 ವರ್ಷಗಳ ನಂತರ ಶ್ರೀವೀರಭದ್ರೇಶ್ವರಸ್ವಾಮಿ ಅಗ್ನಿಕುಂಡ ಜಾತ್ರಾ ಮಹೋತ್ಸವ ನಡೆಯಲಿದೆ.

ಮೇ 5 ರಂದು ಸೋಮವಾರ ಬ್ರಾಹ್ಮಮುಹೂರ್ತದಲ್ಲಿ ಧ್ವಜಾರೋಹಣ ಬೆಳಿಗ್ಗೆ 5-00 ರಿಂದ 7-30 ರವರೆಗೆ ಗಂಗಾ ಪೂಜೆ, ಗಣಪತಿ ಹೋಮ, ಮಹಾರುದ್ರ ಹೋಮ ಮತ್ತು ಸ್ವಾಮಿಯವರಿಗೆ ಮಹಾರುದ್ರಾಭಿಷೇಕ ಮತ್ತು ಲಕ್ಷ ಬಿಲ್ವಾರ್ಚನೆ ನಡೆಯಲಿವೆ.

ಮೇ 6 ರಂದು ಬೆಳಿಗ್ಗೆ 8-30ಕ್ಕೆ ಬಾಯಿ ಬೀಗ ಮತ್ತು ಹೆಜ್ಜೆ ನಮಸ್ಕಾರ, ಮಧ್ಯಾಹ್ನ 1-55 ಕ್ಕೆ ಬಂಡಿ ಉತ್ಸವ ಸಂಜೆ 5-05 ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ ನಡೆಯಲಿದೆ. ಮೇ 7 ರಂದು ಕೀಲಾರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ಉತ್ಸವ ನಡೆಯಲಿದೆ.

ಮೇ 8 ರಂದು ಬೆಳಿಗ್ಗೆ 8-30 ಘಂಟೆಗೆ ಶ್ರೀಸ್ವಾಮಿಯವರ ಕೊಂಡೋತ್ಸವದ ಶಾಂತಿಗಾಗಿ ಆಲಕೆರೆ ಗ್ರಾಮದಲ್ಲಿ ಮಹಾಪ್ರಸಾದ (ಪರ) ವಿನಿಯೋಗ, ರಾತ್ರಿ 8 ಗಂಟೆಗೆ ಆಲಕೆರೆ ಗ್ರಾಮದಲ್ಲಿ ಸ್ವಾಮಿಯವರ ರಥೋತ್ಸವ ನಡೆಯಲಿದೆ. ಕಳೆದ ಬಾರಿ ಈ ಜಾತ್ರಾ ಮಹೋತ್ಸವವು 2001 ರಲ್ಲಿ ನಡೆಯಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ