Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಏ.18ರಂದು ಸಾಧಕರಿಗೆ ಸನ್ಮಾನ – ಸಂಗೀತ ರಸಮಂಜರಿ ಕಾರ್ಯಕ್ರಮ

ಮಂಡ್ಯ ಜಿಲ್ಲಾ ಗಾಯಕರ ಟ್ರಸ್ಟ್‌ನಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏ.18ರ ಸಂಜೆ 5ಕ್ಕೆ ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಹಾಗೂ ಗಾಯಕ ಡಾ.ಮಾದೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿಯೇ ನಾಟಕ ನಿರ್ದೇಶಕರಾಗಿದ್ದ ನಮ್ಮ ತಾತ ಕೆ.ಸಿದ್ದಯ್ಯ ಹಾಗೂ ಕಲಾಪೋಷಕರಾಗಿದ್ದ ತಂದೆ ಮಂಜುನಾಥ್ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ.ನಂಜುಂಡಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ ಸಿಇಓ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವೈದ್ಯರಾದ ಡಾ.ಕಿರಣ್‌ಕುಮಾರ್.ಎಂ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಸಾಧಕರಾದ ಜಿ.ಪಂ ಸಿಇಓ ಕೆ.ಆರ್.ನಂದಿನಿ, ಸಿ.ಐ.ಡಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ದಂಡಿ, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಪ್ರೇಮಕವಿ ಕೆ.ಕಲ್ಯಾಣ್, ಚಲನಚಿತ್ರ ಹಿನ್ನಲೆ ಗಾಯಕ ರಮೇಶ್ ಚಂದ್ರ, ಪ್ರಖ್ಯಾತ ಪೈಲ್ಸ್ ಶಸ್ತ್ರ ಚಿಕಿತ್ಸಕ ಡಾ.ಸಿ.ಎಂ.ಪರಮೇಶ್ವರ್, ಅಂತರಾಷ್ಟ್ರೀಯ ಜಾನಪದ ಗಾಯಕರಾದ ಡಾ.ಮಳವಳ್ಳಿ ಮಹದೇವಸ್ವಾಮಿ, ಡಾ.ಮೈಸೂರು ಗುರುರಾಜ್, ಪ್ರಖ್ಯಾತ ನರರೋಗ ಶಸ್ತ್ರ ಚಿಕಿತ್ಸಕ ಡಾ.ವೆಂಕಟರಮಣ, ಹಿರಿಯ ರೋಗ ಶಸ್ತ್ರಜ್ಞ ಹಾಗೂ ಕವಿ ಡಾ.ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬಿಜೆಪಿ ಮುಖಂಡ ಅಶೋಕ್ ಜಯರಾಮ್ ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಖ್ಯಾತ ಹಿನ್ನಲೆ ಗಾಯಕರಾದ ರಮೇಶ್‌ಚಂದ್ರ, ಶಶಿಕಲಾ ಸುನೀಲ್ ಜೊತೆಯಾಗಿ ಸ್ಥಳೀಯ ಗಾಯಕರಾದ  ಮಹೇಶ್ ಸೂರ್ಯ, ಯರಹಳ್ಳಿ ಪುಟ್ಟಸ್ವಾಮಿ, ಮೋಹನ್, ನೇತ್ರಾವತಿ ಅವರು ತಮ್ಮ ಗಾನಸುಧೆಯನ್ನು ಪ್ರಸ್ತುತ ಪಡಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಯರಹಳ್ಳಿ ಪುಟ್ಟಸ್ವಾಮಿ, ಮಹೇಶ್ ಸೂರ್ಯ, ಗಿರೀಶ್, ಸತ್ಯನಾರಾಯಣ್, ಕೃಷ್ಣಮೂರ್ತಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ