ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಅವರ ಹುಟ್ಟುಹಬ್ಬದ ಅಂಗವಾಗಿ ಮಂಡ್ಯ ಜಿಲ್ಲಾಸ್ಪತ್ರೆಯ ಮಮತೆಯ ಮಡಿಲು ದಾಸೋಹ ಕೇಂದ್ರದಲ್ಲಿ ಸಚ್ಚಿದಾನಂದ ಬೆಂಬಲಿಗರು ಉಪಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿದರು.
ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಪರಿಸರ ರೂರಲ್ ಡೆವಲಪ್ಮೆಂಟ್ ನ ಸಂಸ್ಥೆಯ ಮಮತೆಯ ಮಡಿಲು ಹಾಗೂ ಮಹೇಶ್ ಬೇವಿನಹಳ್ಳಿ ಇವರ ನೇತೃತ್ವದಲ್ಲಿ ಅನ್ನದಾಸೋಹ ನಡೆಸಿ ಇಂಡುವಾಳು ಸಚ್ಚಿದಾನಂದ ಅವರ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಹನಕೆರೆ ಶಶಿಕುಮಾರ್, ಮನು ಬೇವಿನಹಳ್ಳಿ, ಪ್ರತೀಕ್ ದೇವ್, ರಂಜನ್, ದೇವರಾಜು, ಬಸವರಾಜು ಸೇರಿದಂತೆ ಇನ್ನಿತರರಿದ್ದರು.




