Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಂಗೀತ – ಸಾಹಿತ್ಯ ಜೀವಂತಿಕೆ ಕಲೆ ಅನಾವರಣಗೊಳ್ಳಬೇಕಿದೆ : ಕೆ.ಕಲ್ಯಾಣ್

ಪ್ರತಿಯೊಬ್ಬ ಮನುಷ್ಯ ತನಗೆ ತಾನೇ ನಾಟಕ ರಚನೆಕಾರರಾಗಿರುತ್ತಾರೆ, ಜೀವಂತಿಕೆ ಕಲೆ ಅನಾವರಣಗೊಳ್ಳುತ್ತಿರುತ್ತದೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ್ ಹೇಳಿದರು.

ಮಂಡ್ಯ ನಗರದ ಕಲಾಮಂದಿರದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಡ್ರಾಮ ಮಾಸ್ಟರ್ ಕಾಡುಕೊತ್ತನಹಳ್ಳಿ ಕೆ.ಸಿದ್ದಯ್ಯ ಮತ್ತು ಕಲಾ ಪೋಷಕ ಮಂಜುನಾಥ ಸ್ಮರಣಾರ್ಥವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಮತ್ತು ಸಂಗೀತ ರಸಮಂಜರಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಂಸ್ಕೃತಿಕ ಕಲಾವಿದರ ನಡೆ, ನುಡಿ, ಮಾನವೀಯತೆ, ಗುಣ, ಭಾ‍‍‍ಷೆಯ ಸೊಗಡು ಎಲ್ಲವನ್ನೂ ತುಂಬಿಕೊಂಡಿರುವವರು ನಾಟಕ ರಚನಕಾರರಾಗಿರುತ್ತಾರೆ, ಉತ್ತಮ ಗಾಯಕರಿಂದ ಸಾಹಿತ್ಯ ಜೀವಂತವಾಗಿರುತ್ತದೆ, ಗಾಯಕರಾದ ರಮೇಶ್‌ಚಂದ್ರ, ಶಶಿಕಲಾ ಸುನೀಲ್, ಡಾ.ಮಾದೇಶ್‌ ಮಂಜುನಾಥ್ ಪ್ರತಿಭಾವಂತ ಗಾಯಕರಾಗಿ ಬೆಳೆಯಲಿ ಎಂದು ನುಡಿದರು.

ಸಂಗೀತ-ಸಾಹಿತ್ಯ ಸಾಂಸ್ಕೃತಿಕ ಸೊಗಡಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಇಂತಹ ವೇದಿಕೆ ಬೇಕಾಗಿವೆ, ಎಂತಹದ್ದೇ ಕಮರ್ಷಿಯಲ್ ಸಭೆ-ಸಮಾರಂಭ ಮಾಡಿದರೂ ಜನ ಸೇರಲ್ಲ, ಆದರೆ ಕಲಾಮಂದಿರ ತುಂಬುವಷ್ಟು ಸಹೃದಯಿಗಳು ಸೇರಿದ್ದಾರೆಂದರೆ ಅದು ಸಂಗೀತ ಪ್ರೀತಿಯಿಂದ, ಗೌರವದಿಂದ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಜಿ.ಪಂ ಸಿಇಓ ಕೆ.ಆರ್.ನಂದಿನಿ ಮಾತನಾಡಿ, ಮಂಡ್ಯ ನೆಲ ಕಲೆ, ಸಾಹಿತ್ಯ ಸಂಗೀತಕ್ಕೆ ಅಪಾರವಾದ ಕೊಡುಗೆ ನೀಡಿದೆ, ಇಲ್ಲಿ ಕೇವಲ ಕಾವೇರಿ ನದಿ ಮಾತ್ರ ಹರಿಯಲ್ಲ, ಮಣ್ಣಿನಲ್ಲಿಯೂ ಸಕ್ಕರೆಯಿದೆ, ಮಣ್ಣು ಮತ್ತು ನೀರಿನಲ್ಲಿ ಮಾತ್ರ ಸಕ್ಕರೆಯಿರದೆ ಎಲ್ಲರ ಭಾಷೆಯಲ್ಲಿ, ಸಂಗೀತ-ಸಾಹಿತ್ಯದಲ್ಲಿದೆ ಎಂದು ತಿಳಿಸಿದರು.

ಇಧೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಗಾಯಕರಾದ ರಮೇಶ್‌ಚಂದ್ರ, ಶಶಿಕಲಾ ಸುನೀಲ್, ಡಾ.ಮಾದೇಶ್‌ ಮಂಜುನಾಥ್, ಯರಹಳ್ಳಿ ಪುಟ್ಟಸ್ವಾಮಿ, ಮೋಹನ್, ಮಹೇಶ್, ನೇತ್ರಾವತಿ, ಸರ್ವಮಂಗಳ ಇವರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು.

ಸಮಾರಂಭದಲ್ಲಿ ಮಂಡ್ಯ ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್, ಎಎಎಸ್ಪಿ ತಿಮ್ಮಯ್ಯ, ಡಾ.ಕಿರಣ್‌ಕುಮಾರ್, ಡಾ.ಸಿ.ಎಂ.ಪರಮೇಶ್ವರ್, ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ, ಡಾ.ಮೈಸೂರು ಗುರುರಾಜ್, ರೋಗಶಾಸ್ತ್ರಜ್ಞ ಡಾ.ಚಂದ್ರಶೇಖರ್, ವೈದ್ಯರಾದ ಡಾ.ವೆಂಟಕರಮಣ, ಲೇಖಕಿ ಭವಾನಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ