Sunday, May 19, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಪ್ರಕರಣ : ಆದರ್ಶ ಮತ್ತು ವಾಸ್ತವ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನೇ ದಿನೇ ಹಲವರ ಮುಖವಾಡಗಳನ್ನು ಕಳಚುತ್ತಿದೆ.ತನ್ನ ಕುಟುಂಬದ ಅಧಿಕಾರ ಬಲ,ಹಣದ ಮದದಿಂದ ಸಾವಿರಾರು ಹೆಣ್ಣುಮಕ್ಕಳ ಜೊತೆ ವಿಕೃತಿ ಮೆರದಿರುವ ಪ್ರಜ್ವಲ್ ರೇವಣ್ಣ ಎಂಬ ಕಾಮುಕ ಯಾವ ಜಾತಿಯವನೇ ಆಗಿರಲಿ, ಯಾವ ಪಕ್ಷದವನೇ ಆಗಿರಲಿ ಖಂಡಿಸಬೇಕು.

ಇಡೀ ಮಾನವಕುಲವೇ ತಲೆತಗ್ಗಿಸುವಂತಹ ಕೃತ್ಯ ಎಸಗಿರುವ ಪ್ರಜ್ವಲ್ ರೇವಣ್ಣನ ಪರ ಜಾತಿ ಹಾಗೂ ಪಕ್ಷದ ಕಾರಣಕ್ಕೆ ವಹಿಸಿಕೊಂಡು ಮಾತನಾಡುವ ನೀಚಮಟ್ಟಕ್ಕೆ ಹಲವಾರು ಮಂದಿ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಪ್ರಜ್ವಲ್ ರೇವಣ್ಣನ ಪರ ವಹಿಸಿ ಮಾತನಾಡುವುದು ಕೂಡ ಆತ ಮಾಡಿದ ನೀಚ ಕೃತ್ಯದಷ್ಟೇ ಸಮನಾದುದು.

ಪ್ರಜ್ವಲ್ ರೇವಣ್ಣ ಪ್ರಕರಣ ಆದರ್ಶ ಹಾಗೂ ವಾಸ್ತವ ಸಂಗತಿ ತಿಳಿಯೋಣ

ಆದರ್ಶ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಮೇಲೆ ಆರೋಪ ಬಂದ ತಕ್ಷಣ ಜನರಿಂದ ಮತ, ಅಧಿಕಾರ ಎಲ್ಲವನ್ನೂ ಪಡೆದಿರುವ ಪ್ರಜ್ವಲ್ ಕುಟುಂಬದ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವಂದಿರು ಸಂಬಂಧಿಕರು ಎಲ್ಲರೂ ಪ್ರೆಸ್ ಮೀಟ್ ಮಾಡಿ ಪ್ರಜ್ವಲ್ ಮಾಡಿರುವುದು ತಪ್ಪು, ಅವನು ಸರಿ ಇಲ್ಲ, ಅವನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲಿ ಎಂದು ಹೇಳಿದ್ದರೆ ಅದು ಆದರ್ಶ.

ವಾಸ್ತವ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಗರಣ ಹೊರಗೆ ಬಂದ ಕೂಡಲೇ ಸಂತ್ರಸ್ತೆ ಕಡೆಯ ಕುಟುಂಬದ ಸದಸ್ಯರು ಹಾಸನದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ನಮ್ಮ ಮನೆಯ ಹೆಣ್ಣು ಮಗಳು ಸರಿ ಇಲ್ಲ, ಅವಳು ನಡತೆಗೆಟ್ಟವಳು ಎಂದು ಪ್ರೆಸ್ ಮೀಟ್ ಮಾಡುವುದು ವಾಸ್ತವ.

ಹೀಗಿದೆ ನೋಡಿ…ಪ್ರಜ್ವಲ್ ರೇವಣ್ಣ ಪ್ರಕರಣದ ಆದರ್ಶ ಮತ್ತು ವಾಸ್ತವ. ಒಟ್ಟಾರೆ ಪ್ರಜ್ವಲ್ ಪ್ರಕರಣ ಹಲವಾರು ಮಂದಿಯ ಮುಖವಾಡವನ್ನು ಅನಾವರಣಗೊಳಿಸಿ, ಬೆತ್ತಲು ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!