Friday, November 20, 2026

ಪ್ರಾಯೋಗಿಕ ಆವೃತ್ತಿ

ದಲಿತರ ಸಮಸ್ಯೆ ಬಗೆಹರಿಸಲು 3 ಇಲಾಖೆಗಳ ಅಧಿಕಾರಿಗಳ ಸಭೆ ; ಮಲ್ಲಿಕಾರ್ಜುನ ಬಾಲದಂಡಿ

ಮಳವಳ್ಳಿ ತಾಲ್ಲೂಕಿನ ದಲಿತರ ಸಾಕಷ್ಟು ಸಮಸ್ಯೆಗಳು ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ಪೊಲೀಸ್ ಇಲಾಖೆ ಸೇರಿದಂತೆ ಈ ಮೂರು ಇಲಾಖೆಗಳನ್ನು ಒಳಗೊಂಡ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭರವಸೆ ನೀಡಿದರು.

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿಕ್ಕೆರೆ ಗ್ರಾಮದ ದಲಿತ ಮುಖಂಡರು ಐದು ಎಕರೆ ಪೈಕಿ ಒಂದು ಎಕರೆಗೆ ಮಾತ್ರ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವ್ಯಕ್ತಿ ಐದು ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದು ತಡೆಯಾಜ್ಞೆಯಾಗಿರುವುದನ್ನು ಬಿಟ್ಟು ಉಳಿದ ಜಾಗವನ್ನು ಬಿಡಿಸಿಕೊಡಲು ತಾಲೂಕು ಆಡಳಿತ ಮೀನಾಮೇಷ ಎಣಿಸುತ್ತಿದ್ದು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಹಲವಾರು ಭಾರಿ ದೂರು ನೀಡಿದರು ಪ್ರಯೋಜನವಾಗಿಲ್ಲ, ಶವಸಂಸ್ಕಾರಕ್ಕೆ ಹೋದಾಗಲೆಲ್ಲಾ ಸರ್ವಣಿಯರು ತಡೆಯೊಡ್ಡುತ್ತಿದ್ದು ಮೃತರ ಶವವನ್ನು ಕೆರೆ ಏರಿಮೇಲೆ ಹೂಳಲಾಗುತ್ತಿದೆ ಎಂದು ಪರಿಸ್ಥಿತಿ ಯನ್ನು ವಿವರಿಸಿದರು. ಈ ಕುರಿತು ತಹಶಿಲ್ದಾರ್ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಎಸ್ಪಿ ಅವರು ಸೂಚಿಸಿದರು.

ಕಿರುಗಾವಲು ಗ್ರಾಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಲ್ಲು ತೋರಿ ಹಾನಿಗೊಳಿಸಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿ ಆತನಿಗೆ ನ್ಯಾಯಾಲಯ ಶಿಕ್ಷೆ ಸಹ ವಿಧಿಸಿದ್ದರೂ ಈವರೆಗೂ ಆತನನ್ನು ಪೊಲೀಸರು ಆತನನ್ನು ಪೊಲೀ ಸರು ಬಂಧಿಸಿಲ್ಲ ಎಂಬ ಮತ್ತೊಂದು ಗಂಭೀರ ವಿಷಯ ಇಂದಿನ ಸಭೆಯಲ್ಲಿ ಪ್ರಸ್ತಾಪಗೊಂಡಿತು.

ಐನೋರ ಹುಂಡಿ ಗ್ರಾಮದಲ್ಲಿನ ಮುರಾರ್ಜಿ ಶಾಲೆ ಸುತ್ತ ಕಾಂಪೌಂಡ್ ಹಾಕಲು ಅಡ್ಡಿಪಡಿಸುತ್ತಿರುವ ಸರ್ವರ್ಣಿಯರು ಈ ಶಾಲಾ ಜಾಗದಲ್ಲಿ ಮಾರಮ್ಮನ ದೇವಸ್ಥಾನ ಕಟ್ಟಲು ಮುಂದಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಮುಖಂಡ ಸರಗೂರು ಕುಮಾರಸ್ವಾಮಿ ಆಗ್ರಹಿಸಿದರು.

ಸಭೆಯಲ್ಲಿ ಡಿವೈಎಸ್ಪಿ ಕೃಷ್ಣಪ್ಪ, ಇನ್ಸ್ ಪೆಕ್ಟರ್ ಗಳಾದ ಶ್ರೀಧರ್, ಮಹೇಶ್, ರವಿಕುಮಾರ್ ಹಾಗೂ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಹಲವಾರು ದಲಿತ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ