Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕತ್ತೆ ಮೇಲೆ ಯತ್ನಾಳ್ ಪ್ರತಿಕೃತಿ ಇಟ್ಟು ಮೆರವಣಿಗೆ – ಆಕ್ರೋಶ

ದಲಿತ ಮಹಿಳೆಯರನ್ನು ಅಪಮಾನ ಮಾಡಿರುವ ಆರೋಪ ಎದುರಿಸುತ್ತಿರುವ ವಿವಾದಿತ ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿಕೃತಿಯನ್ನು ಕತ್ತೆಯ ಮೇಲೆ ಮೆರವಣಿಗೆ ಮಾಡಿ ಮಂಡ್ಯದಲ್ಲಿ ದಲಿತ ಹಾಗೂ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

ಮಂಡ್ಯನಗರದ ಜೆ.ಸಿ ವೃತ್ತದಲ್ಲಿ ಯತ್ನಾಳ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಯತ್ನಾಳ್ ಪ್ರತಿಕೃತಿ ಪೊಲೀಸರು ಕಿತ್ತುಕೊಳ್ಳಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಯತ್ನಾಳ್ ಪ್ರತಿಕೃತಿಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಪ್ರಯತ್ನಿಸಿದರಾದರೂ ಪೊಲೀಸರು ಪ್ರತಿಕೃತಿ ಕಿತ್ತೊಯ್ದರು.

ದಲಿತರ ಬಗ್ಗೆ ನಾಲಿಗೆ ಹರಿಯ ಬಿಟ್ಟು ಅವಮಾನ ಮಾಡಿದ ಯತ್ನಾಳ್ ವಿರುದ್ದ SC,ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಯತ್ನಾಳ್ ಒಬ್ಬ ಅಯೋಗ್ಯ ಒಬ್ಬ, ಹುಚ್ಚ, ಪೋರ್ಕಿ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

ಯತ್ನಾಳ್ ನನ್ನು ದಲಿತ ಮಹಿಳೆಯರು 2028ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕಲಿದ್ದಾರೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಿಮ್ಮನ್ನ ಮನೆಗ ಕಳುಹಿಸುವ ಕೆಲಸ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡರಾದ ನರಸಿಂಹಮೂರ್ತಿ, ಡಿಎಸ್ಎಸ್ ಕೃಷ್ಣ, ವಕೀಲ ಚೀರನಹಳ್ಳಿ ಲಕ್ಷಣ್, ನಿರಂಜನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಆಟೋಕೃಷ್ಣ ಹಾಗೂ ನಂಜುಂಡಮೌರ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ