Saturday, November 21, 2026

ಪ್ರಾಯೋಗಿಕ ಆವೃತ್ತಿ

ದಲಿತ ಹಕ್ಕುಗಳ ಸಮಿತಿಯಿಂದ ಅಧ್ಯಯನ ಶಿಬಿರ : ರಾಜಶೇಖರ್

ದಲಿತ ಹಕ್ಕುಗಳ ಸಮಿತಿ ವತಿಯಿಂದ ದಲಿತರ ಸಾಮಾಜಿಕ ಆರ್ಥಿಕ, ರಾಜಕೀಯ, ಅಭಿವೃದ್ಧಿ ಕುರಿತು ಅಧ್ಯಯನ ಶಿಬಿರವನ್ನು ಮೇ 10-11ರಂದು ಮಂಡ್ಯನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಯಿಂದಾಗಿ ಅತ್ಯಲ್ಪ ಪ್ರಮಾಣದಲ್ಲಿ ದಲಿತ ಸಮುದಾಯ ಪ್ರಗತಿ ಕಂಡಿದ್ದರೂ, ಬಹುಪಾಲು ದಲಿತರ ಸ್ಥಿತಿ ಅವಲೋಕಿಸಲು ಹಾಗೂ ಪ್ರಜಾಸತ್ತಾತ್ಮಕವಾಗಿ ದಲಿತರನ್ನು ಸಂಘಟಿಸಲು ಶಿಬಿರ ಆಯೋಜಿಸಲಾಗಿದೆ ಎಂದರು.

ಮೇ 10ರಂದು ಬೆಳಿಗ್ಗೆ 11 ಗಂಟೆಗೆ ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜು ಅವರು ಅಧ್ಯಯ ಶಿಬಿರವನ್ನು ಉದ್ಘಾಟಿಸಲಿದ್ದು, ಜಾತಿಯ ಹುಟ್ಟು, ವಿಕಾಸ, ವಿನಾಶದ ಕುರಿತು ಉಪನ್ಯಾಸ ನೀಡುವರು, ದಲಿತರ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ಬಿ.ರಾಜಶೇಖರಮೂರ್ತಿ ಉಪನ್ಯಾಸ ನೀಡುವರು ಎಂದರು.

ಮೇ.11ರಂದು ದಲಿತರ ವಿಮೋಚನೆಯ ಹಾದಿಗಳ ಕುರಿತು ಯು.ಬಸವರಾಜು, ದಲಿತ ಹಕ್ಕುಗಳ ಸಮಿತಿಯ ಸಂಘಟನೆ ಕುರಿತು ಗೋಪಾಲಕೃಷ್ಣ ಹರಳಹಳ್ಳಿ ಮತ್ತು ಸಂಘಟನೆಯ ಕಾರ್ಯಯೋಜನೆ ಕುರಿತು ಎನ್.ರಾಜಣ್ಣ ಉಪನ್ಯಾಸ ನೀಡಲಿದ್ದು, ಒಟ್ಟು ನಾಲ್ಕು ವಿಷಯಗಳ ಕುರಿತು ಅಧ್ಯಯನ ನಡೆಯಲಿದೆ. ರಾಜ್ಯದ ಹಲವು ಜಿಲ್ಲೆಗಳನ್ನು ಪ್ರತಿನಿಧಿಸಿ 200 ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷೆ ಸಿ.ಕುಮಾರಿ, ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಅಂಬೂಜಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ