ವರದಿ : ನ.ಲಿ.ಕೃಷ್ಣ
ಮರಿಯೊಂದಿಗೆ ಚಿರತೆ ಪ್ರತ್ಯಕ್ಷವಾಗಿ ಕಂಡು ರೈತರು ಆತಂಕಗೊಂಡ ಪ್ರಕರಣ ಇಂದು ಮಧ್ಯಾಹ್ನ ನಡೆದಿದೆ
ನಗರಕೆರೆ ಗ್ರಾಮದ ತೊರೆ ಮಾಲದಲ್ಲಿನ ಪ್ರದೇಶದಲ್ಲಿ ಚಿರತೆ ಕಂಡಿದೆ.
ಕಳೆದ ಹದಿನೈದು ದಿನಗಳಿಂದ ಚಿರತೆ ಇರುವಿಕೆ ಸುದ್ದಿ ಹರಡಿತ್ತಾದರು ಇಷ್ಠೊಂದು ನೇರಾ ನೇರ ಚಿರತೆ ಕಂಡಿರಲಿಲ್ಲಾ. ಇಂದು ಮಧ್ಯಾಹ್ನದ ಸಮಯದಲ್ಲಿ ರೈತರಾದ ಎನ್. ಎಲ್. ಬಲರಾಮು ಅವರ ಪುತ್ರ ಚಿರಾಗ್ ಅವರು ತೊಟದ ಕಡೆ ಹೋದಾಗ ಚಿರತೆ ಮರಿಯೊಂದಿಗೆ ಇರುವುದನ್ನ ಅತಿ ಸನಿಹದಲ್ಲೆ ಕಂಡಿದ್ದಾರೆ.
ಈ ಕುರಿತು ಇತರೆ ರೈತರನ್ನ ಕರೆದು ಚಿರತೆ ಇರುವುದನ್ನ ತೋರಿಸಿ, ಎಚ್ಚರಿಕೆಯಿಂದ ಇರಲು ಸೂಚಿಸಿ
ಮುಂಜಾಗ್ರತಾ ಕ್ರಮವಾಗಿ ಆರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ ಅವರಿಗೆ ಚಿರತೆ ಇರುವ ಸುದ್ದಿ ತಿಳಿಸಿದ್ದಾರೆ.
ರೈತರಿಂದ ಸುದ್ದಿ ತಿಳಿದ ಗವಿಯಪ್ಪ ಮಂಗಳವಾರ ಬೆಳಿಗ್ಗೆಯೇ ತಮ್ಮ ಸಿಬ್ಬಂಧಿಯನ್ನು ನಗರಕೆರೆಯಲ್ಲಿನ ಚಿರತೆ ಕಂಡ ಸ್ಥಳಕ್ಕೆ ಕಳುಹಿಸಿಕೊಡುವುದಾಗಿ ಹೇಳಿ ರೈತರು ಎಚ್ಚರಿಕೆಯಿಂದ ಇರಲು ಸಲಹೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಕಾಡು ಹಂದಿ, ಮುಳ್ಳು ಹಂದಿಗಳ ಹಾವಳಿ ವಿಪರೀತವಾಗಿದ್ದು ಆಹಾರ ಅರಸಿ ಬಂದ ಚಿರತೆ
ಇಲ್ಲೆ ಬೀಡು ಬಿಟ್ಟಿರುವುದಾಗಿ ಇಲ್ಲಿನ ರೈತಮುಖಂಡರಾದ ಎನ್ ಎಸ್ ಪ್ರಸನ್ನಕುಮಾರ್, ಮಲ್ಲಿಕಾರ್ಜುನ, ಧನಂಜಯ್ಯ ಕುಮಾರ್ ಮತ್ತಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿರತೆ ಇಲ್ಲಿ ನೆಲೆಸಿರುವುದು ಈ ಭಾಗದ ಕೃಷಿಕರು ಕುರಿಗಾಹಿಗಳ ಸುರಕ್ಷತೆಗೆ ದಕ್ಕೆ ಬಂದಿದೆ. ಈ ಮೊದಲು ಈ ಪ್ರದೇಶದಲ್ಲಿ ಜಮೀನಿನ ಕಾವಲಿಗೆ ಕಟ್ಟಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬೋನ್ ಇರಿಸಿ ಕಾರ್ಯಚರಣೆ ಮಾಡಿದ್ದರು. ಆದರೆ ಚಿರತೆ ಸೆರೆ ಸಿಕ್ಕಿರಲಿಲ್ಲಾ.
ಈಗಲಾದರೂ ಅರಣ್ಯ ಇಲಾಖೆಯ ಕಾರ್ಯಚರಣೆ ಯಶಸ್ವಿಗೊಂಡರೆ ಮಾತ್ರ ಈ ಭಾಗದ ರೈತರ ಆತಂಕವು ದೂರಾಗುವುದೆ ಕಾಯ್ದು ನೋಡಬೇಕು.




