Tuesday, May 21, 2024

ಪ್ರಾಯೋಗಿಕ ಆವೃತ್ತಿ

ಸೆ.30 ರೊಳಗೆ ಇ-ಕೆವೈಸಿ ಮಾಡದಿದ್ದಲ್ಲಿ ಮಾಶಾಸನ ಸ್ಥಗಿತ: ಡಾ.ಹೆಚ್.ಎಲ್ ನಾಗರಾಜು

ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ ಮತ್ತುಆರ್ಥಿಕ ಭದ್ರತಾ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಫಲಾನುಭವಿಗಳು ಕಡ್ಡಾಯವಾಗಿ ಇ.ಕೆ.ವೈ.ಸಿ ಮಾಡಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ತಿಳಿಸಿದರು

ಜಿಲ್ಲೆಯಲ್ಲಿ OA, PHP, DYP, SSY, ಮನಸ್ವಿನಿ, ಮೈತ್ರಿ ಯೋಜನೆಯಲ್ಲಿ ಮಾಶಾಸನ ಮಂಜೂರಾಗಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಮಾಶಾಸನ ಜಮೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಸುಮಾರು 12,822 ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ತಮಗೆ ಮಾಶಾಸನ ಪಾವತಿ ಮಾಡುವ ಬ್ಯಾಂಕ್ ಖಾತೆಗೆ ಲಿಂಕ್ (E-KYC) ಮಾಡಿರುವುದಿಲ್ಲ. ಫಲಾನುಭವಿಗಳಿಗೆ ಇ- ಕೆವೈಸಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸ್ಥಳೀಯವಾಗಿ ರೆವೆನ್ಯೂ ಇನ್ಸ್ಪೆಕ್ಟರ್ ಅಥವಾ ವಿಲೇಜ್ ಅಕೌಂಟೆಂಟ್ ರವರನ್ನು ಸಂಪರ್ಕ ಮಾಡಿ, ಮಾಹಿತಿ ಪಡೆದುಕೊಂಡು ಇ.ಕೆ.ವೈಸಿ ಮಾಡಿಸಿಕೊಳ್ಳುವುದು ಎಂದು ತಿಳಿಸಿದ್ದಾರೆ.

ಸೆ.30 ರೊಳಗೆ ಇ.ಕೆವೈಸಿ ಮಾಡಿಸದೇ ಮಾಶಾಸನ ಸ್ಥಗಿತವಾದಲ್ಲಿ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!