Wednesday, November 18, 2026

ಪ್ರಾಯೋಗಿಕ ಆವೃತ್ತಿ

ಬುದ್ದ- ಬಸವ – ಅಂಬೇಡ್ಕರ್ ಸರ್ವರಿಗೂ ಸೇರಿದವರು : ಸತೀಶ್

ವರದಿ : ನ.ಲಿ.ಕೃ‍ಷ್ಣ

ಬುದ್ದ ಬಸವ ಅಂಬೇಡ್ಕರ್ ರವರ ತತ್ವ ಆದರ್ಶಗಳನ್ನ ಎಲ್ಲರು ಅಳವಡಿಸಿಕ್ಕೊಳ್ಳಬೇಕು,ಈ ಮಹನೀಯರು ಎಲ್ಲಾರಿಗೂ ಸೇರಿದವರು ಎಂದು ರಾಣಿ ಐಶ್ವರ್ಯ ಡೆವಲಪರ್ಸ್ ಅಧ್ಯಕ್ಷ ಎಚ್.ಎಲ್. ಸತೀಶ್ ತಿಳಿಸಿದರು.

ಸಂವಿಧಾನ ರಕ್ಷಣಾ ವೇದಿಕೆ ಹಾಗೂ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಮದ್ದೂರಿನಲ್ಲಿ ಹಮ್ಮಿಕ್ಕೊಂಡಿದ್ದ ಬುದ್ದ ಬಸವ ಅಂಬೇಡ್ಕರ್ ಜನ್ಮ‌ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಮಹನೀಯರ ಹುಟ್ಟುಹಬ್ಬದ ಆಚರಣೆ ಜೊತೆಗೆ ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ರಾಣಿ ಐಶ್ವರ್ಯ ಡೆವಲಪರ್ಸ್ ವತಿಯಿಂದ ಮದ್ದೂರು ತಾಲ್ಲೂಕಿನಲ್ಲಿ ನಡೆಯುವ ಅಂತರ್ ಜಾತಿಯ ಮದುವೆಗೆ
25,000 ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೊಷಿಸಿದರು.

ಮದ್ದೂರು ತಾಲ್ಲೂಕು ಬುದ್ದೀಸ್ಟ್ ಸಂಘದ ಅಧ್ಯಕ್ಷ ಎಂ.ಸಿ.ಬಸವರಾಜ್ ಮಾತನಾಡಿ,
ಶಾಂತಿ ಮಾರ್ಗದಿ ಧರ್ಮ ಆರಂಭಿಸಿ, ಶಾಂತಿ ಮಂತ್ರ ಬೋಧಿಸಿದ ಏಕೈಕ ಗುರುಗಳು
ಭಗವಾನ್ ಬುದ್ದರು. ಆಂಬೇಡ್ಕರ್ ಅವರು ಕೂಡ ಅಹಿಂಸಾ ಮಾರ್ಗದಲ್ಲಿ ನಡೆದು ಶಾಂತಿ ಸ್ಥಾಪನೆಗೆ ಮುಂದಾದರು ಎಂದು ವಿವರಿಸಿದರು

‘ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ಅಧ್ಯಕ್ಷ ಎಮ್ ವಿನಯ್ ಕುಮಾರ್ ಮಾತನಾಡಿ,
ಅಂಬೇಡ್ಕರ್ ಅವರ ಸಂವಿಧಾನ ಬಸವಣ್ಣನವರ ಮಾನವತಾ ವಾದದ ತತ್ವವನ್ನು ಒಳಗೊಂಡಿದೆ.
ಅನುಭವ ಮಂಟಪದ ಮೂಲಕ‌ ಎಲ್ಲಾರೊಳಗೊಂದಾಗುವ ಮನಸ್ಸಿನೊಂದಿಗೆ ಸಮ‌ಸಮಾಜ ಕಟ್ಟಲು ಶ್ರಮಿಸಿದ ಮಹಾನ್‌ ದಾರ್ಶನಿಕರು ಬಸವಣ್ಣನವರು ಎಂದು ಸ್ಮರಿಸಿದರು.

ಇಂದು ಶೂದ್ರ ಸಮಾಜದಲ್ಲಿ ಜಾತಿಯ ಶ್ರೇಷ್ಠತೆಯ ಭ್ರಮೆ ಆವರಿಸಿರುವುದು ವಿಷಾದದ ಸಂಗತಿ, ಜಾತಿ ಧರ್ಮ ಗಳನ್ನು ದಾಟಿ ಮಾನವಿಯತೆಯನ್ನ ಮೆರೆಯಬೇಕು ಎಂದರು

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟಚಲುವಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಬೋರಯ್ಯ, ಮದ್ದೂರು ಪುರಸಭೆಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಹುರಗಲವಾಡಿ ರಾಮಯ್ಯ ಹಾಗೂ ಶಶಿಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ