Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಆಸ್ತಿ ಪರಭಾರೆ ಮಾಡಿದವರು ತೆರವುಗೊಳಿಸಿ : ಗಂಗಾಧರ್

ಅನಧಿಕೃತವಾಗಿ ಮೈಷುಗರ್ ಸಕ್ಕರೆ ಕಾರ್ಖಾನೆ ಆಸ್ತಿಯನ್ನು ಪರಭಾರೆ ಮಾಡಿರುವವರು ಕೂಡಲೇ ತೆರವು ಗೊಳಿಸುವಂತೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಮಂಡ್ಯ ತಹಸಿಲ್ದಾರ್ ಕಚೇರಿಯಲ್ಲಿ ಮೈಷುಗರ್ ಆಸ್ತಿ ಕುರಿತಂತೆ ತಹಶೀಲ್ದಾರ್ ನೇತೃತ್ವದಲ್ಲಿ ಡಿಡಿಎಲ್ಆರ್, ರಾಜಸ್ವ ನಿರೀಕ್ಷಕರ ಸಭೆ ನಡೆಸಿ ಅವರು ಮಾತನಾಡಿದರು.

ಅನಧಿಕೃತವಾಗಿ ಮೈಷುಗರ್ ಆಸ್ತಿಯನ್ನು ಪರಭಾರೆ ಮಾಡಿಕೊಂಡಿರುವವರನ್ನು ತೆರವುಗೊಳಿಸಿ, ರೆವಿನ್ಯೂ ಜನರೇಟ್ ಮಾಡಲು ಕ್ರಮ ವಹಿಸಲಾಗುವುದು. ಒಂದು ವೇಳೆ ಮೈಷುಗರ್ ಸಕ್ಕರೆ ಕಂಪನಿ ನಿಯಮಾವಳಿ ಪ್ರಕಾರ ಮಾಸಿಕವಾಗಿ ನಿಗದಿ ಮಾಡಿರುವ ರೆವಿನ್ಯೂ ಜನರೇಟ್ ಮಾಡಿ ಎರಡು ಇಲ್ಲವೆಂದ ಮೇಲೆ ಕಂಪನಿ ಆಸ್ತಿಯನ್ನು ಕಂಪನಿಗೆ ತೆಗೆದುಕೊಳ್ಳುವುದರಲ್ಲಿ ಯಾವುದೇ ರೀತಿಯ ರಾಜಿಯಿಲ್ಲ ಎಂದು ಹೇಳಿದರು.

ಒಂದು ವೇಳೆ ಕಂಪನಿ ಹೆಸರಿನಲ್ಲಿ ಆರ್’ಟಿಸಿ ಇದ್ದು, ಯಾವುದೇ ರೀತಿಯ ಕಾನೂನು ಬದ್ಧವಾಗಿ ಮಂಜೂರಾತಿ ಇಲ್ಲ, ಎಂದರೆ ಯಾವುದೇ ರೀತಿಯ ನೋಟೀಸ್ ಕೊಡದೆ ತುರ್ತಾಗಿ ಕಂಪನಿಯ ಸಂಪೂರ್ಣ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಡಾ. ಶಿವಕುಮಾರ್ ಬಿರಾದಾರ್, ಡಿಡಿಎಲ್ ಆರ್ ಮಮತಾ, ಸೇರಿದಂತೆ ಕಂದಾಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ