ಸಂಜು ಆಲಕೆರೆ
ಸಂಚು : ಬಹಳ ದಿನ ಆದ್ಮೇಲೆ ಏನೋ ಮಾತಾಡ್ ಬೇಕು ಅಂತ ಬಂದಿದ್ಯ ಏನ್ ಸಮಾಚಾರ..
ಪಂಚು : ಮಗಾ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ಯಾ..
ಸಂಚು : ನಗರ ಪ್ರದೇಶಗಳಲ್ಲಿ ಅಷ್ಟೆನೋ ಚಾಲ್ತಿಯಲ್ಲಿಲ್ಲ, ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿದೆ..
ಪಂಚು : ಅಸ್ಪೃಶ್ಯತೆ ಸಮಾಜಕ್ಕೆ ಕಳಂಕ, ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿ ಕೃತ್ಯ ಅಲ್ವಾ..
ಸಂಚು : ಸಂವಿಧಾನ ಅಂತೆಲ್ಲ ಮಾತಾಡ್ತಿದ್ಯ, ಏನೋ ಕೇಳ್ತೀನಿ ಬೇಜಾರ್ ಮಾಡ್ಕೋಬೇಡ, ಅಂದಹಾಗೆ ನಿಮ್ದು ಯಾವ್ ಜಾತಿ..

ಪಂಚು : ಇಷ್ಟು ವರ್ಷದ ನಮ್ಮ ಸ್ನೇಹದಲ್ಲಿ ಜಾತಿ ಅನ್ನೋ ಪದ ಬಂದಿರ್ಲಿಲ್ಲ ಆದ್ರೆ ಇವತ್ತು ನೀನು ಕೂಡಾ ಜಾತಿ ಕೇಳ್ತಿದ್ಯಲ್ಲ ಮಗಾ,
ಸಂಚು : ಏನಿಲ್ಲ ಸಂವಿಧಾನ ನ್ಯಾಯ ನೀತಿ ಅಂತ ಹೇಳ್ತಿದ್ದಲ್ಲ, ಅದಿಕ್ಕೆ ಆ ಜಾತಿಯವನೇನೋ ಅನ್ಕೊಂಡೆ,
ಪಂಚು : ಆ ಜಾತಿಯವನು ಅಂದ್ರೆ,
ಸಂಚು : ಅದೇ ಊರಿನ ಕೊನೆ ಭಾಗದವರು,
ಪಂಚು : ಇಸ್ಟ್ ದಿನ ನಿನ್ನನ್ನ ಒಳ್ಳೆಯ ಸ್ನೇಹಿತ ವಿಚಾರವಂತ, ಅಂತೆಲ್ಲ ತಿಳ್ಕೊಂಡಿದ್ದೆ, ಜಾತಿ ಅನ್ನೋ ಭೂತಕ್ಕೆ ಆಶ್ರಯ ಕೊಟ್ಟಿದ್ದಿಯ ಅಂತ ಗೊತ್ತಿರ್ಲಿಲ್ಲ..
ಸಂಚು : ವಿಚಾರಗಳ ವಿನಿಮಯಕ್ಕಾಗಿ ಕೆಲವೊಂದು ಸಲ ನಾವು ಕೂಡಾ ಎಲ್ಲ ರೀತಿಯಲ್ಲಿಯೂ ಸಿದ್ದವಾಗಬೇಕಲ್ಲವೆ ಹಾಗಾಗಿ ಕೇಳ್ದೆ ಬೇಜಾರ್ ಆಗ್ಬೇಡ, ನಾನ್ ಏನು ಅಂತ ನಿನಗೆ ಗೊತ್ತಲ್ವಾ,
ಪಂಚು : ಏನೋ ಒಂದು ಅರ್ಥ ಆಗ್ತಿಲ್ಲ..
ಸಂಚು : ಏನಿಕ್ಕೆ ಇವತ್ತು ಅಸ್ಪೃಶ್ಯತೆ ಬಗ್ಗೆ ಕೇಳ್ತಿದ್ಯ ಏನ್ ಆಯ್ತು..
ಪಂಚು : ಹಳೆಯ ಪದ್ಧತಿಗಳಂತೆ ಏನ್ ನಡೆಯುತ್ತೊ ಬಿಡುತ್ತೋ ಆದ್ರೆ ಈ ಆ ಜಾತಿ ಮೇಲು ಈ ಜಾತಿ ಕೀಳು ಅನ್ನೋ ಆಚರಣೆ ಯಾವತ್ತೂ ಬದಲಾಗಲ್ಲ..
ಸಂಚು : ಏಕ ಕಾಲದಲ್ಲಿ ಯಾವುದು ಬದಲಾಗುವುದಿಲ್ಲ, ಬದಲಾವಣೆಗಾಗಿ ಮುನ್ನುಗಿದ್ದರೆ, ವಾತಾವರಣ ಬೇರೆ ರೂಪವನ್ನೇ ಪಡೆದು ಕೊಳ್ಳುತ್ತದೆ..
ಪಂಚು : ಆಸ್ಪತ್ರೆಯ ಕೆಲಸ, ಹೊಸ ಮನೆಯ ಕಟ್ಟಡದ ಕೆಲಸ, ಮನೆಗೆ ತರುವ ವಸ್ತುಗಳು ಯಾವ ಜಾತಿಯವನ ಬೆವರಿನ ಶ್ರಮ ಎಂಬುದು ಯಾರಿಗೂ ಬೇಡಾ ಆದರೆ, ಹಬ್ಬ ಹರಿದಿನದಲ್ಲಿ ಮೇಲು ಕೀಳು, ನೀನು ಇದ್ ಮಾಡು ಅದ್ ಮಾಡೋಹಾಗಿಲ್ಲ, ಅನ್ನೋ ಮಾತುಗಳು ನೆರೆದಿರುವವರ ಮುಂದೆ ತಲೆ ತಗ್ಗಿಸುವಂತೆ ಮಾಡಿ ಬಿಡುತ್ತೆ..
ಸಂಚು : ಹೀಗಿನ ತಲೆಮಾರಿನ ಗ್ರಾಮೀಣ ಭಾಗದ ಎಷ್ಟೋ ಜನರಲ್ಲಿ ಮೇಲು ಕೀಳು ಎಂಬ ಭಾವನೆ ಇಂದ ಆಚೆ ಇದ್ದಾರೆ ಆದರೆ, ಮನೆಯ ಹಿರಿಯರ ಮಾತನ್ನು ದಿಕ್ಕರಿಸಲು ಸಿದ್ದರಿಲ್ಲವಷ್ಟೇ..
ಪಂಚು : ಊಟಕ್ಕೆ ಕುಳಿತಾಗ ಜಾತಿ ಕೇಳಿ ಊಟ ಕೊಡದೆ ಎಬ್ಬಿಸಿದ ಹಳೆಯ ಕಾಲದ ಘಟನೆಗಳು, ಈ ಡಿಜಿಟಲ್ ಯುಗದಲ್ಲಿಯೂ ಮರುಕಳಿಸುತ್ತಿವೆ,
ಸಂಚು : ಜಾಸ್ತಿ ನೊಂದು ಕೊಳ್ಳಬೇಡ, ನಿನಗೆ ಬೆಲೆ ಇಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನು ಬಿಡಬೇಡ ಎನ್ನುವ ಮಾತನ್ನು ನೆನಪಿಸಿ ಕೊಂಡು ಜೀವನ ಮಾಡು..
ಪಂಚು : ಬಸವಣ್ಣನವರಿಂದ ಮುಕ್ತಿ ಪಡೆದ ಜನರೇ ಭಕ್ತಿ ಹೆಸರಿನಲ್ಲಿ, ಜಾತಿ ಜಾತಿ ಅಂತ ಇಂಚಿಂಚು ನೋಹಿಸುವುದು ಸರಿಯಲ್ಲ..
ಸಂಚು : ದೀಪ ಹಾರುವ ಮುನ್ನ ಪ್ರಜ್ವಲಿಸುವುದಂತೆ, ಪ್ರಜ್ವಲೀಸಲಿ ಬಿಡು ಅಂಧಕಾರದ ದೀವಿಗೆಯ ಬೆಳೆಕು ಮರೆಯಾಗಿ, ಸಮಾನತೆಯ ಕಿರಣಗಳು ಬೆಳಕು ಮೂಡುತ್ತದೆ..
ಪಂಚು : ಆ ಬೆಳಕನ್ನು ಕಾಣುವಷ್ಟರಲ್ಲಿ ನಮ್ಮ ಆಯಸ್ಸೇ ಮುಗಿಯುವುದೇನೋ..
ಸಂಚು : ಕಾನೂನು ಚೌಕಟ್ಟಿನಲ್ಲಿ, ಇದು ಹೆಚ್ಚು ಸಮಯ ಹಿಡಿಯುವುದಿಲ್ಲ, ಜನರ ಆಚರಣೆಗೆ ಬರುವುದಕ್ಕೆ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ..
ಪಂಚು : ಮರ್ತಿದ್ದೆ ನಮ್ದು ಬೇಸಾಯ ಮಾಡೋ ಜಾತಿಯವನು, ಊಟಕ್ಕೆ ಕುಳಿತಾಗ ಆ ಸಾಲಿಗೆ ಹೋಗಿ ಈ ಸಾಲು ನಿಮ್ಮದಲ್ಲ ಎಂದರು, ನಾನು ಬೆಳೆದ ಆಹಾರ ಪದಾರ್ಥ ಅವರ ತಟ್ಟೆಯಲ್ಲಿತ್ತು, ನಾನು ಮಾತ್ರ ಅವರ ಪಕ್ಕ ಕುಳಿತು ಕೊಳ್ಳುವುದು ತಪ್ಪಂತೆ.
ಸಂಚು : ಲೋ ನೀನ್ ಯಾಕೊ ಅವರ ಪಕ್ಕದಲ್ಲಿ ಕೂತ್ಕೋಳ್ಳೋಕೆ ಹೋಗಿದ್ದೆ,
ಪಂಚು : ಊರಿನವರೆಲ್ಲ ಒಟ್ಟಾಗಿ ಸೇರಿದ್ದಾರೆ ಅಲ್ವಾ, ಹೊಟ್ಟೆ ಹಸಿವಿತ್ತು ಜಾಗ ಕಾಲಿಯಿತ್ತು ಅದಿಕ್ಕೆ ಹೋಗಿ ಕುಳಿತಿದ್ದೇ ಅಷ್ಟೇ, ಅದಲ್ಲದೆ ಟೆಬಲ್ ಊಟ ಅಲ್ವಾ, ಟೆಬಲ್ ಚೇರುಗಳನ್ನ ತಿಥಿ ಊಟ, ಮದ್ವೆ ಊಟ, ನೆರ್ವಿ ಊಟ ಅಂತ ಎಲ್ಲದಕ್ಕೂ ಬಳಕೆ ಮಾಡ್ಕೋತಾರೆ ಅವುಗಳನ್ನೇ ಕಡೆಗಣಿಸದಿದ್ದಮೇಲೆ, ಮನುಷ್ಯ ರನ್ನು ಕಡೆಗಣಿಸುತ್ತಾರ ಎಂದು ಭಾವಿಸಿದ್ದೇ..
ಸಂಚು : ನೀನು ಗ್ರಾಮೀಣ ಭಾಗದ ಬಗ್ಗೆ ತಿಳ್ಕೊಳ್ಳೋದು ತುಂಬ ಇದೆ ಹೋಗ್ಲಿ ಬಿಡು ಇದೆಲ್ಲ ನಿಧಾನಕ್ಕಾದ್ರೂ ಬದಲಾವಣೆ ಆಗುತ್ತೆ, ಮದ್ವೆ ಯಾವಾಗ..
ಪಂಚು : ಮದ್ವೆ ಅಂತೇ ಮದ್ವೆ ಹೋಗ್ ಕೆಲ್ಸ ನೋಡು,
ಸಂಚು : ಹಾಗಲ್ಲ ಮದ್ವೆಯಲ್ಲಿ ನೀನು ಜಾತಿ ನೋಡಲ್ವಾ ಅಂತ ತಿಳ್ಕೊಬೇಕಿತ್ತು ಅದಿಕ್ಕೆ ಕೇಳ್ದೆ..
ಪಂಚು : ಮದ್ವೆ ದಿನ ಬಂದು ಪ್ರೇಶ್ನೆ ಮಾಡುವಂತೆ ನಡಿ..




