ಮಂಡ್ಯ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದಿಂದ ನಗರದ ಗುತ್ತಲು ಕಾಲೋನಿ ಬಸವನಗುಡಿಯಲ್ಲಿರುವ ಕಾಳಮ್ಮನ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ 63ನೇ ವರ್ಷದ ಹುಟ್ಟುಹಬ್ಬವನ್ನು ಸಂಘದ ಅಧ್ಯಕ್ಷ ದೇವಯ್ಯ (ಪಾಪಣ್ಣ) ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ನಂತರ ಮಾತನಾಡಿದ ದೇವಯ್ಯ (ಪಾಪಣ್ಣ) ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆರೋಗ್ಯ, ಆಯಸ್ಸು ಮತ್ತು ಮುಖ್ಯಮಂತ್ರಿ ಸ್ಥಾನ ಲಭಿಸಲೆಂದು ಕಾಳಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಆರೋಗ್ಯ ಮತ್ತು ಆಯಸ್ಸು ನೀಡಿ ಬಡ,ಮಧ್ಯಮ ಜನರಿಗೆ ಅನುಕೂಲ ಮಾಡಿಕೊಡಲು ದೇವರು ಹೆಚ್ಚಿನ ಶಕ್ತಿ ನೀಡಲಿ. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಕೆ ರುದ್ರಪ್ಪ, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಕೋ. ಶಿವಲಿಂಗಯ್ಯ, ನಾಗರಾಜು, ಕೆಇಬಿ ಶಿವಲಿಂಗಯ್ಯ, ಶಿವರುದ್ರ, ಸುಮನ್, ಕಿರಣ್ ಕುಮಾರ್, ಪಳಿನಿ, ರಮೇಶ್ ಗೌಡ ಹಾಜರಿದ್ದರು.




