ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 34ನೇ ಸ್ಮಾರಕ ದಿನದ ಅಂಗವಾಗಿ ಬೆಂಗಳೂರಿನಿಂದ ತಮಿಳುನಾಡಿನ ಪೆರಂಬೂರಿಗೆ ಹೊರಟಿರುವ ರಾಜೀವ್ ಜ್ಯೋತಿ ಯಾತ್ರೆಯಲ್ಲಿ ಮಂಡ್ಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮದಿಂದ ಸ್ವಾಗತಿಸಿದರು.
ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಮುಖಂಡ ಕ್ರಾಂತಿಸಿಂಹ ಸೇರಿದಂತೆ ಹಲವು ಮುಖಂಡರು ಜ್ಯೋತಿಯನ್ನು ಬರ ಮಾಡಿಕೊಂಡು, ರಾಜೀವ್ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಬೆಂಗಳೂರಿನಿಂದ ಹೊರಟಿರುವ ಯಾತ್ರೆಯು ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಯಮತ್ತೂರು, ಸತ್ಯಮಂಗಲಂ, ಫಲಕ್ಕಾಡು, ಕೊಚ್ಚಿನ್, ಕೋಲಂ, ತ್ರಿವೆಂಡ್ರಂ, ಕನ್ಯಾಕುಮಾರಿ, ತಿರುನಾಲ್ವೆಲಿ, ಮಧುರೈ, ವಿಲ್ಲಿಪುರಂ, ಪಾಂಡಿಚೇರಿ ತಲುಪಿ, ನಂತರ ಚೈನೈ ತಲುಪಿ, ಅಂತಿಮವಾಗಿ ಮೇ 21ರಂದು ಪರಂಬೂರನ್ನು ತಲುಪಲಿದೆ, ಅಲ್ಲಿ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ರಾಜೀವ್ ಜ್ಯೋತಿ ಯಾತ್ರೆಯು ಸಹೋದರತೆ, ಮತ್ತು ಏಕತಾ ಅಗತ್ಯತೆ, ಭಯೋತ್ಪಾದನೆ ವಿರುದ್ಧ ದೃಢ ಚಟುವಟಿಕೆಗಳ ಮಹತ್ವವನ್ನು ಜನರಲ್ಲಿ ಜಾಗೃತಿ ಮೂಡಿಸಿ, ದೇಶದ ಶತ್ರುಗಳ ವಿರುದ್ಧ ಹೋರಾಡುವ ಧೈರ್ಯ ಮತ್ತು ಬದ್ಧತೆಯನ್ನು ಬೆಳಸುವ ಕಾರ್ಯವನ್ನು ಜಾಗೃತಗೊಳಿಸಲಿದೆ.




