Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕ್ಷಯರೋಗ ಪತ್ತೆ ಮಾಡುವ ‘ಟ್ರೂ ನಾಟ್’ ಯಂತ್ರದ ಉದ್ಘಾಟನೆ

ಮಂಡ್ಯ ನಗರದ ಕ್ಯಾತಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ ಪತ್ತೆ ಮಾಡುವ ಟ್ರೂ ನಾಟ್ ಯಂತ್ರವನ್ನು ಶಾಸಕ ರವಿಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದು ಶೀಘ್ರ ಕ್ಷಯ ರೋಗ ಪತ್ತೆ ಮಾಡುವ ಟ್ರೂ ನಾಟ್ ಯಂತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾತಂಗೆರೆಯಲ್ಲಿ ಉದ್ಘಾಟನೆ ಮಾಡಿದ್ದೇವೆ , ಹಳ್ಳಿಗಳಿಂದ ಕಫದ ಮಾದರಿಯನ್ನು ತಂದು ಈ ಯಂತ್ರದ ಮೂಲಕ ಕ್ಷಯ ರೋಗವನ್ನು ಶೀಘ್ರದಲ್ಲಿ ಪತ್ತೆ ಮಾಡಿ ಕ್ಷಯ ರೋಗ ಇದ್ದಲ್ಲಿ ಶೀಘ್ರದಲ್ಲಿ ಚಿಕಿತ್ಸೆಯನ್ನು ನೀಡಲು ಈ ಯಂತ್ರ ಉಪಯೋಗವಾಗಲಿದೆ, ಇದರಿಂದ ಮಂಡ್ಯ ಕ್ಷಯ ಮುಕ್ತ ಜಿಲ್ಲೆ ಮಾಡಲಿದ್ದೇವೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಮಾತನಾಡಿ , ಕ್ಷಯ ರೋಗ ಗಾಳಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಕೆಮ್ಮು, ತೂಕ ಕಡಿಮೆಯಾಗುವುದು , ಊಟ ಸೇರದೆ ಇರುವುದು, ಸಂಜೆ ಸಮಯದಲ್ಲಿ ದೇಹ ಬೆಚ್ಚಗೆ ಆಗುವುದು ಈ ರೋಗದ ಲಕ್ಷಣವಾಗಿದೆ ಎಂದರು.

೨೦೨೫ಕ್ಕೆ ಭಾರತ ಸರ್ಕಾರ ಕ್ಷಯ ಮುಕ್ತ ಮಾಡಲು ಗುರಿ ಹೊಂದಿದೆ, ಆ ಉದ್ದೇಶದಿಂದ ಟ್ರೂ ನಾಟ್ ಯಂತ್ರವನ್ನು ಎಲ್ಲ ಕೇಂದ್ರದಲ್ಲೂ ಅಳವಡಿಸಿ ಅತೀ ಶೀಘ್ರದಲ್ಲೇ ರೋಗಾಣುವನ್ನು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ಮಂಡ್ಯ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಈಗಾಗಲೇ 8 ಟ್ರೂ ನಾಟ್ ಯಂತ್ರ ಹಾಗೂ 3 ಸಿಬಿ ನಾಟ್ ಯಂತ್ರ ಇದ್ದು 110 ಬ್ಯಾಕ್ಟೀರಿಯಾ ಇದ್ದರು ಸಹ ಅತಿ ಶೀಘ್ರದಲ್ಲಿ ರೋಗಾಣುಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು.

ಮಂಡ್ಯ ಜಿಲ್ಲಾಧ್ಯಂತ ಆಶಾ ಕಾರ್ಯಕರ್ತರು ಹಾಗೂ ನಮ್ಮ ಅರೋಗ್ಯ ಸಿಬ್ಬಂದಿಗಳು ಪ್ರತಿ ಹಳ್ಳಿಗಳಲ್ಲಿ ತೆರಳಿ ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ಅಸ್ತಮಾ ಹಾಗೂ ಧೂಮಪಾನ ಮಾಡುವವರ ಬಳಿ ಕಫದ ಮಾದರಿ ಪಡೆದು ಈ ಯಂತ್ರದ ಮೂಲಕ ಪರೀಕ್ಷೆ ಮಾಡುತ್ತಿದ್ದೇವೆ , ರೋಗಲಕ್ಷಣಗಳು ಕಂಡು ಬಂದಲ್ಲಿ ಶೀಘ್ರದಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಶಶಿಕಲಾ ಹಾಗೂ ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ