Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ಸಿಂಗ್ರೀಗೌಡನಕೊಪ್ಪಲು ಉಪ ಪಡಿತರ ಕೇಂದ್ರ ಉದ್ಘಾಟನೆ

ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದಲ್ಲಿ ಮಾಣಿಕ್ಯನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹೊಸದಾಗಿ ತೆರೆಯಲಾದ ಉಪ ಪಡಿತರ ಕೇಂದ್ರವನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.

ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ ಕಾರ್ಯಕ್ರಮದ ಪ್ರಯುಕ್ತ ಸಿಂಗ್ರಿಗೌಡನಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ದೂರದ ಮಾಣಿಕ್ಯನಹಳ್ಳಿ ಗ್ರಾಮದಿಂದ ಮಹಿಳೆಯರು, ವೃದ್ಧರು, ಮಕ್ಕಳು ಪಡಿತರ ತರುವುದು ಕಷ್ಟವಾಗುತ್ತಿದೆ. ಆದ್ದರಿಂದ ನಮ್ಮ ಗ್ರಾಮದಲ್ಲೇ ಪಡಿತರ ನೀಡುವ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣ ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸಿ, ಸಿಂಗ್ರಿಗೌಡನ ಕೊಪ್ಪಲು ಗ್ರಾಮದಲ್ಲೇ ಉಪ ಪಡಿತರ ಕೇಂದ್ರ ತೆರೆಯುವಂತೆ ನಿರ್ದೇಶಿಸಿದ್ದರು. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಉಪ ಪಡಿತರ ಕೇಂದ್ರವನ್ನು ಉದ್ಘಾಟಿಸಿ ಪಡಿತರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಖಜಾಂಚಿ ಬಾಬು (ಕೃಷ್ಣೇಗೌಡ), ಗ್ರಾ.ಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಜ್ಯೋತಿ, ಮಾಜಿ ಸದಸ್ಯೆ ಅರ್ಪಿತಾ, ಪಿಡಿಒ ಕುಮಾರ್, ಮುಖಂಡರಾದ ಬಸವರಾಜು, ಸ್ವಾಮಿಗೌಡ, ಸಣ್ಣೇಗೌಡ, ಕೆಂಪೇಗೌಡ, ಮಹದೇವ, ಚಂದು, ಕೃಷಿ ಪತ್ತಿನ ಕಾರ್ಯದರ್ಶಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ