Friday, November 20, 2026

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಆಶಯ ಈಡೇರಿಕೆಗೆ ಪ್ರಾದೇಶಿಕ ಪಕ್ಷ ; ಸಿ.ಎಂ.ಇಬ್ರಾಹಿಂ

ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ-ಅಧಿಕಾರ, ಸ್ಥಾನಮಾನಗಳು ಲಭ್ಯವಾಗುತ್ತಿವೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಮತ್ತು ರಾಜ್ಯದಲ್ಲಿ ಹೊಸ ಬದಲಾವಣೆಗಾಗಿ ಪ್ರಾದೇಶಿಕ ಪಕ್ಷವೊಂದು ಸ್ಥಾಪನೆಯಾಗಲಿದೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಮಂಡ್ಯನಗರದ ಕರ್ನಾಟಕ ಸಂಘದ ಕೆವಿಎಸ್‌ಎಸ್ ಭವನದಲ್ಲಿ ಸ್ವಾಭಿಮಾನಿ ಸ್ವಾವಲಂಬಿ ನವಕರ್ನಾಟಕ ನಿರ್ಮಾಣ ಆಂದೋಲನ ಆಯೋಜಿಸಿದ್ದ “ಜನತೆಯ ನಡುವೆ ಜನತಾ ಪ್ರಣಾಳಿಕೆಯ ಚರ್ಚೆ” ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇವತ್ತೀನ ದಿವಸ ಜೈಲಿಗೆ ಹೋಗಿ ಬಂದವರೇ ನಾಯಕರು ಎನ್ನುತ್ತಾರೆ, ಇವತ್ತು ಈ ದೇಶದ ಪರಿಸ್ಥಿತಿ ನೀನು ಎಷ್ಟು ತಿಂದಿದ್ದೀಯ ಎನ್ನುವ ಮಟ್ಟಿಗೆ ಬೆಳೆಯುತ್ತಿದೆ. ಪ್ರಧಾನಮಂತ್ರಿ ಮೋದಿ ಆಡಳಿತದಲ್ಲಿ 24 ಮಂದಿ ಯೋಧರು ಸತ್ತರು, ಅವರನ್ನು ಹೊಡೆದವರು ಯಾರು, ಅವರನ್ನು ಹಿಡಿದವರು ಯಾರು, ಇವತ್ತಿನ ಹೊರೆಗೆ ಗೊತ್ತಾಗಿಲ್ಲ ಎಂದು ಛೇಡಿದರು.

ರಾಜ್ಯದಲ್ಲಿ 2 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ, ಸರ್ಕಾರಗಳು ಭರ್ತಿ ಮಾಡಿಕೊಳ್ಳುತ್ತಿಲ್ಲ, ನಿರುದ್ಯೋಗಿಗಳು ಏನು ಆಗಬೇಕು, ಮಹಿಳೆರಿಗೆ 2 ಸಾವಿರ ಹಣ ನೀಡುವ ಬದಲು ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ 10 ಕೋಟಿ ರೂ. ಹಣ ನೀಡಿ, ಉದ್ಯೋಗ-ಉದ್ಯಮ ಸೃಷ್ಠಿಯಾಗುತ್ತವೆ ಎಂದು ಸಲಹೆ ನೀಡಿದರು.

ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 2028ಕ್ಕೆ ಹೊಸ ಪ್ರಾದೇಶಿಕ ಪಕ್ಷ ಅಧಿಕಾರ ಹಿಡಿಯುವ ಸಾಮರ್ಥ್ಯಕ್ಕೆ ಜನತೆ ಬಂಬಲ ನೀಡಬೇಕು, ಕಾಂಗ್ರೆಸ್, ಜೆಡಿಎಸ್ ಬಿಜೆಪಿ ತೊಲಗಿಸಿ, ನಾವು ನೀವು ಅಧಿಕಾರ ಹಿಡಿಯಬೇಕಿದೆ ಎಂದರು.

5 ಗ್ಯಾರಂಟಿ ಯೋಜನೆಗಳು ಮುಂದಿನ ಚುನಾವಣೆಗೆ ಲಂಚದ ರೂಪದಲ್ಲಿವೆ, ಅಡ್ವಾನ್ಸ್ ಆಗಿ ಜನರಿಗೆ ಮಂಕುಬೂದಿ ಎರಚುತ್ತಿವ ಕಾರ್ಯಕ್ರಮಗಳಾಗಿವೆ, ಓಟಿಂಗ್ ಗಿಮಿಕ್ ಎಂದು ಕುಟುಕಿದರು.
ಹೊಸ ಬದಲಾವಣೆ ತರಿದ್ದರೆ, ನೀವು ನಾವು ಹೀಗೆ ಇರುತ್ತೇವೆ, ಅನಾಹುತಕಾರಿ ಬೆಳೆವಣಿಗೆಗೆ ರಹದಾರಿಯಾಗುತ್ತದೆ, ಬಡವರು ಬಡವರಾಗಿಯೇ ಇರುತ್ತಾರೆ, ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಾರೆ ಎಂದು ಎಚ್ಚರಿಸಿದರು.

ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ರಾಜ್ಯ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಗಳು ಶಾಶ್ವತ ಅಲ್ಲ, ಓಟಿನ ರಾಜಕರಣಕ್ಕಾಗಿ ನೀಡುತ್ತಿರುವುದು, ಅದರ ಬದಲು ಭೂ ರಹಿತ ತಲಾ ಕುಟುಂಬಕ್ಕೆ 2 ಏಕರೆ ಭೂಮಿ ನೀಡಲಿ, ರೈತರೇ ಅಕ್ಕಿ-ರಾಗಿ ನೀಡುತ್ತಾರೆ, ಇಂತಹ ಎದೆಗಾರಿಕೆ ತೋರುವ ಧೈರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಎಐಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ಜಿಲ್ಲಾಧ್ಯಕ್ಷ ಕೆ.ಎಂ.ಅನಿಲ್‌ಕುಮಾರ್, ಉಪಾಧ್ಯಕ್ಷ ಬಿ.ಆನಂದ್ ಮದ್ದೂರು, ಮಹಿಳಾ ಘಟಕ ಅಧ್ಯಕ್ಷೆ ಸುಶ್ಮಿತಾ, ದಸಂಸ ಮುಖಂಡ ಬ್ಯಾಡರಹಳ್ಳಿ ಪ್ರಕಾಶ್, ಆರ್.ಪಿ.ಐ. ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ರಾಜ್ಯಾಧ್ಯಕ್ಷ ಮೋಹನ್‌ರಾಜ್, ಶ್ರೀನಿವಾಸ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ