ಮೌಢ್ಯತೆ ವಿರುದ್ಧ ಧ್ವನಿಯೆತ್ತಿ ವೈಚಾರಿಕತೆ ಪ್ರತಿಪಾದಿಸಿದ ಕುವೆಂಪು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ರೈತನಾಯಕಿ ಸುನಂದ ಜಯರಾಂ ಶ್ಲಾಘಿಸಿದರು.
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನೆಲದನಿ ಬಳಗ ಮಂಗಲ, ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷನಲ್ ಹಾಗೂ ಡಿ ಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನ’ ಮತ್ತು ಅಭಿನಂದನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಪ್ರತಿಯೊಬ್ಬ ಕನ್ನಡಿಗರಿಗೂ ಚಿರಪರಿಚಿತ ಯುಗದ ಕವಿ ರಾಷ್ಟ್ರಕವಿ ಕುವೆಂಪು ಅವರು ಆ ಸ್ಥಾನದಲ್ಲಿ ಸದಾ ಹಸಿರಾಗಿ ನಿಲ್ಲುತ್ತಾರೆ, ಅಂದಿನ ಕಾಲದಲ್ಲಿದ್ದ ಮೌಡ್ಯತೆಯ ವಿರುದ್ಧ ಧ್ವನಿ ಎತ್ತಿ ವೈಚಾರಿಕ ವಿಷಯಗಳನ್ನು ಸಂದೇಶವಾಗಿ ನೀಡಿರುವುದು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಕುವೆಂಪು ಅವರ ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿ ಅನುಕರಣೆಯ ಕುವೆಂಪು ಅವರ ವೈಚಾರಿಕತೆಯನ್ನು ಈಗಲೂ ನಾವು ಪಾಲಿಸುತ್ತಿದ್ದೇವೆ, ಸಂಪ್ರದಾಯ ಮೌಡ್ಯತೆಯ ವಿರುದ್ಧವಾಗಿ ಬದುಕು ನಡೆಸಲು ಕುವೆಂಪು ಅವರೇ ಪ್ರೇರಣೆ ಎಂದರು.
ಸಮಾಜ ದಿಕ್ಕು ತಪ್ಪಿ ಹೋಗುತ್ತಿದೆ ಎಂದರೆ ಇದರಲ್ಲಿ ನಾವು ಆದಿ ತಪ್ಪುತಿಲ್ಲ ಆಳುವ ವ್ಯವಸ್ಥೆಯು ಪ್ರಜಾಪ್ರಭುತ್ವವನ್ನೇ ಮರೆತು ಸಾಗುತ್ತಾ ಅವರು ಹೇಳಿದ್ದೆ ಮಾತಾಗಿ ಹೋಗಿದೆ ಇದರ ಬದಲಾವಣೆ ಆಗಬೇಕಾದರೆ ಇಂತಹ ನಾಟಕ ಪ್ರದರ್ಶನಗಳು ಬೆಳಕು ಚೆಲ್ಲುತ್ತವೆ ಎಂದು ಅಭಿಪ್ರಾಯಪಟ್ಟರು.
ಮನುಜ ಮತ ವಿಶ್ವಪಥ ಮಾತು ಇಂದಿಗೂ ಪ್ರಸ್ತುತ
ಕೆಂಗೇರಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಮನುಜ ಮತ ವಿಶ್ವಪಥ ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ ರೈತ ಸಮುದಾಯಕ್ಕೆ ದುಡಿಯುವವರಿಗೆ ಸನ್ಮಾನ ಮಾಡುತ್ತಿರುವುದು ಮೆಚ್ಚುವ ಕೆಲಸವಾಗಿದೆ. ಸಾಂಸ್ಕೃತಿಕ ಸಮಾರಂಭಕ್ಕೆ ಆಗಮಿಸಿ ನಾಟಕ ವೀಕ್ಷಣೆಗೆ ಆಗಮಿಸಿರುವ ಕಲಾಪ್ರೇಕ್ಷಕರಿಂದ ಇದೆ ರೀತಿ ಪ್ರೋತ್ಸಾಹ ಸಿಗಲಿ ಎಂದು ಹೇಳಿದರು.

ನೆಲದನಿ ಬಳಗ ಮಂಗಲ ಇವರು ಮಾಡುತ್ತಿರುವ ವಿವಿಧ ಸೇವಾ ಕಾರ್ಯಗಳು ಜನಪರ ಮೆಚ್ಚುಗೆಗೆ ಪಾತ್ರವಾಗಿವೆ ರಕ್ತದಾನ ಹಾಗೂ ಗುಣಮಟ್ಟದ ನಾಟಕ ಪ್ರದರ್ಶನ ಸೇರಿದಂತೆ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಿಮ್ಸ್ ನ ವೈದ್ಯರಾದ ಡಾ. ಮನೋಹರ್ ಡಾ. ರವಿಕುಮಾರ್ ಹಾಗೂ ನವೋದಯ ತರಬೇತಿ ಕೇಂದ್ರದ ಕಾರ್ಯದರ್ಶಿ ಎಚ್.ಆರ್ ಕನ್ನಿಕಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಯಿಸಲಾಯಿತು ಬಳಿಕ ಪ್ರದರ್ಶನಗೊಂಡ ಅಣ್ಣ ನೆನಪು ಸಾಕ್ಷ್ಯ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಹಲವರು ನಾಟಕಕ್ಕೆ ಪ್ರೋತ್ಸಾಹ ಧನ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ. ವಿ ನಾಗರಾಜ ಬೈರಿ, ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ ಟಿ ಹನುಮಂತು, ರಾಜ್ಯಪಾಲ ಮಾದೇಗೌಡ, ಪ್ರೊ.ಜಯಪ್ರಕಾಶ್ ಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ ರಮೇಶ್, ಜಾಗೃತ ಕರ್ನಾಟಕದ ಎನ್ ನಾಗೇಶ್, ನೆಲದನಿ ಬಳಗ ಅಧ್ಯಕ್ಷ ಮಂಗಲ ಎಂ.ಸಿ.ಲಂಕೇಶ್, ಗೌರವಾಧ್ಯಕ್ಷೆ ರುಕ್ಮಿಣಿ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಕನ್ನಡ ಸೇನೆ ಮಂಜುನಾಥ್, ಇನ್ಸ್ಪೈರ್ ವಿನಯ್ ಕುಮಾರ್, ಎಂ.ಆರ್.ಮಂಜುನಾಥ್ ಮುತ್ತಗೆರೆ, ಕೋಮಲ್ ಕುಮಾರ್ ಮತ್ತಿತರರಿದರು.




