Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಆಸ್ಪತ್ರೆ ಸುಧಾರಣೆಗೆ ಪ್ರಮಾಣಿಕ ಪ್ರಯತ್ನ : ಡಾ.ಬಾಲಕೃಷ್ಣ

ಹೃದಯಾಘಾತದ ವೇಳೆಯಲ್ಲಿ ಸುರಕ್ಷತಾ ಕಿಟ್ ಇಡಲು ಕ್ರಮ ವಹಿಸಲಾಗುವುದು ಎಂದು ಮದ್ದೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಭರವಸೆ ನೀಡಿದರು.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಹೃತಿಕ್ಷಾ ಸಾವಿನ ಹಿನ್ನಲೆಯಲ್ಲಿ ಮದ್ದೂರು ಆಸ್ಪತ್ರೆ ಸೌಕರ್ಯಗಳ ಉನ್ನತಿಕರಣ , ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಲ್ಲಿ ಸ್ಪಂದನಾಶೀಲತೆ ಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಇಂದು ನಡೆದ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೃದಯಾಘಾತ ಆದ ವೇಳೆ ಪ್ರಾಥಮಿಕವಾಗಿ ನೀಡುವ ಮಾತ್ರೆಗಳು ಲಭ್ಯ ಇದೆಯಾ ? ಎಂದು ಪ್ರಾಂತ ರೈತಸಂಘದ ಅಧ್ಯಕ್ಷ ಎಸ್ ವಿಶ್ವನಾಥ್ ಕೇಳಿದ ಪ್ರಶ್ನೆಗೆ ವೈದ್ಯಾಧಿಕಾರಿ ಬಾಲಕೃಷ್ಣ ಅವರು ಇನ್ನು ಮುಂದೆ ಹೃದಯಘಾತಕ್ಕೆ ಬೇಕಾದ ಕಿಟ್ ಅನ್ನು ಇಡಲು‌ ಕ್ರಮವಹಿಸಲಾಗುವುದು ಎಂದರು.

ತಡರಾತ್ರಿ ಆಸ್ಪತ್ರೆಗೆ ಬರುವಾ ರೋಗಿಗಳಿಗೆ ಬಿಪಿ, ಶುಗರ್ ಪರೀಕ್ಷೆಗೆ ಆಗತ್ಯ ಸಲಕರಣೆ ಇರುವುದಿಲ್ಲ, ಹೀಗಾದರೆ ರೋಗಿಗಳ ಸುರಕ್ಷತೆ ಹೇಗೇ? ಎಂದು ಎಸ್ ಪ್ರಸನ್ನ ಕುಮಾರ್ ಪ್ರಶ್ನಿಸಿದರು ನಮ್ಮ ಕಡೆಯಿಂದಲೇ ಲೋಪ ಆಗಿದೆ, ನಾವು ಸಿಬ್ಬಂದಿ, ಕೆಲವು ರೋಗಿಗಳು ಬರುವ ಅಂದಾಜಿನಲ್ಲಿ ಕಡಿಮೆ ಸಲಕರಣೆ ಕೊಟ್ಟಿರುತ್ತೇವೆ, ಹೆಚ್ಚು ರೊಗಿಗಳು ಬಂದಾಗ ತೊಂದರೆ ಆಗಿದೆ, ಇದಕ್ಕೆ ನಮ್ಮ ವೈದ್ಯಕೀಯ ಸಿಬಂದಿಗಳನ್ನು ದೂರುವುದು ಬೇಡ ಎಂದರು.

ಈ ವೇಳೆ ನ.ಲಿ.ಕೃಷ್ಣ ಮಾತನಾಡಿ ಸಲಕರಣೆ ದುಪ್ಪಟ್ಟುಗೊಳಿಸಿ ರೊಗಿಗಳಿಗೆ ಅನುಕೂಲ ಕಲ್ಪಿಸಿ ಎಂದು ಸಲಹೆ ನೀಡಿದರು. ಖಂಡಿತಾ ಈ ನಿಟ್ಟಿನಲ್ಲಿ ಕ್ರಮವಹಿಸುವಾ ಭರವಸೆ ನೀಡಿದರು. ನಾಯಿಕಡಿತ ಹಾಗೂ ಹಾವು ಕಡಿತಕ್ಕೆ ಬೇಕಾದ ಇಂಜೆಕ್ಷನ್ ಗಳ ಲಭ್ಯತೆ ಇರುವುದಾಗಿ ಹಾಗಲಹಳ್ಳಿ ಬಸವರಾಜು ಅವರ ಪ್ರಶ್ನೆಗೆ ಮಾಹಿತಿ ನೀಡಿದರು.

ಗರ್ಭಿಣಿಯರ ಮಾಸಿಕ ತಪಾಸಣೆ ನಡೆಸುವ ವೈದ್ಯರು ತುಂಬು ಗರ್ಭಿಣಿಯರು ಹೆರಿಗೆ ದಿನ ಸಮೀಪಿಸಿದಾಗ ಗರ್ಭದಿಂದ ನೀರು ಹೋಗುವ ಲಕ್ಷಣ ಕಂಡು ಬಂದಾಗ ಸ್ತ್ರೀ ರೋಗ ವೈದ್ಯರು ದೂರವಾಣಿ ಕರೆಗೆ ಸ್ಪಂದಿಸುವ ಆಗತ್ಯ ಇದೆ. ಶನಿವಾರ, ಭಾನುವಾರ ಸ್ತ್ರೀರೋಗ ವೈದ್ಯರ ಲಭ್ಯ ಇಲ್ಲದೆ ತೊಂದರೆ ಅನುಭವಿಸುವಂತೆ ಆಗಿದೆ.

ತಿಪ್ಪೂರಿನ ಪ್ರಕರಣ ಉಹಾಹರಿಸಿದ ಮನು ಅವರು ಮಂಡ್ಯ ಆಸ್ಪತ್ರೆಗೆ ಹೊಗುವಷ್ಟರಲ್ಲಿ ಮಗು ಹೊಟ್ಟೆಯಲ್ಲೆ ಸಾವನ್ನಪ್ಪಿದ ಸಂಗತಿ ವಿವರಿಸಿದರು.

ಈ ವಿಷಯ ತಿಳಿದು ಮದ್ದೂರು ಸರ್ಕಾರಿ‌ ಅಸ್ಪತ್ರೆಯ ಸೇವಾ ಕೊರತೆ ಪ್ರತ್ಯಕ್ಷದರ್ಶಿಯ ಉದಾಹರಣೆ ಕೇಳಿ ಸಭೆ ಆತಂಕ ವ್ಯಕ್ತಪಡಿಸಿ, ಹೀಗೆ ಆದರೆ ಜೀವಗಳಿಗೆ ಬೆಲೆ ಇಲ್ಲವೇ ?ಶಿಶು ಮರಣ, ತಾಯಿ ಮರಣ ತಪ್ಪಿಸುವಲ್ಲಿ ಸರ್ಕಾರ ಎನ್ ಎಚ್ ಎಂ ಕಾರ್ಯಕ್ರಮದಡಿ ರೂಪಿಸಿದೆ ಈ ಕಾರ್ಯಕ್ರಮದ ಫಲಶೃತಿ ಇದೆಯೇನು ? ಎಂದು ವೈದ್ಯಾಧಿಕಾರಿ ಗಳನ್ನು ಖಾರವಾಗಿ ಪ್ರಶ್ನಿಸಿತು. ಮುಂದೆ ಹೀಗಾಗದಂತೆ ಕ್ರಮ ವಹಿಸಲು ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಈ ವೇಳೆ ಜನಾರ್ದನ್ ಹಾಗೂ ಮರಳಿಗ ಶಿವರಾಜ್ ಆಸ್ಪತ್ರೆಗೆ ಬರುವ ಗರ್ಭಿಣಿಯರು ಚಿಕಿತ್ಸೆಗೆ ತಮ್ಮ ಸರದಿ ಬರುವವರೆಗೆ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ, ಇದು ಆಸ್ಪತ್ರೆಯ ಧೋರಣೆಯನ್ನು ಬಿಂಬಿಸಲಿದೆ ಎಂದು ನೈಜ ಉದಾಹರಣೆ ನೀಡಿದರು. ಇದಕ್ಕೆ ಸಮಜಾಯಿಸಿ ನೀಡಿದ ವೈದ್ಯಾಧಿಕಾರಿ ಸದ್ಯ ಆಸನಗಳನ್ನು ಬದಲಿಸಿ ಅನುಕೂಲ ಕಲ್ಪಿಸಲು ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲೂ ಆಸನ ವ್ಯವಸ್ಥೆ ಇದೆ, ಸುಧಾರಿತ ಆಸನ‌ ವ್ಯವಸ್ಥೆಗೆ ಕ್ರಮ ಅಗಿದೆ ಎಂದರು.

ವೈದ್ಯರು ಸಕಾಲಿಕವಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂಬ ದೂರಿದೆ, ಇ- ಹಾಜರಾತಿಗೆ ಕ್ರಮ ವಹಿಸಿ ಎಂದರು. ಈಗಾಗಲೇ ನೂತನ ವ್ಯವಸ್ಥೆ ಜಾರಿಯಾಗಿದ್ದು ಬೆಳಿಗ್ಗೆ, ಸಂಜೆ ಇ -ಹಾಜರಿ ವ್ಯವಸ್ಥೆ ಅಳವಡಿಕೆ ಆಗಿದ್ದು
ತಡವಾಗಿ ಬಂದರೆ ಅಷ್ಠು ಸಮಯವನ್ನು ವೈದ್ಯರ ಹಕ್ಕಿನ ರಜೆಯಲ್ಲಿ ಕಡಿತಗೊಳಿಸಲಾಗುವುದು ಎಂದರು.

ತಿಪ್ಪೂರು ರಾಜೇಶ್ ವೈದ್ಯರಲ್ಲಿ ರೋಗಿಯ ಬಗ್ಗೆ ಸಹಾನುಭೂತಿ ಇಲ್ಲ, ನೆಪಗಳನ್ನು ಹುಡುಕಿ ಅನಗತ್ಯವಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗ ಹಾಕಲಾಗುತ್ತಿದೆ. ಇದು ಸರಿಯಲ್ಲ ಇದಕ್ಕೆ ಏನು ಕ್ರಮ ವಹಿಸುತ್ತೀರಿ ಎಂದು ಪ್ರಶ್ನಿಸಿದರು. ವೈದ್ಯರ ಇಂತಹ ಕ್ರಮ ಗುರುತಿಸಲಾಗಿದೆ. ಈವರೆಗೆ ಸೌಹರ್ದತೆ ಯಿಂದ ಸಮಸ್ಯೆ ಪರಿಹರಿಸಲು ಮೌಖಿಕವಾಗಿ ತಿಳುವಳಿಕೆ ನೀಡಲಾಗುತ್ತಿತ್ತು, ಇನ್ನು ಲಿಖಿತ ನೊಟೀಸ್ ನೋಡಿ ಕ್ರಮವಹಿಸಲಾಗುವುದು ಎಂದರು.

ಕೆ.ರವಿಕುಮಾರ್ ಅವರು ಮಹಿಳೆ ಮಕ್ಕಳ ದಾಖಲಾತಿಗಾಗಿ ಪ್ರತ್ಯಕ ವಾರ್ಡ್ ಲಭ್ಯ ಇದೆಯ ಎಂದು ಕೇಳಿದ ಪ್ರಶ್ನೆಗೆ ನೂರು ಹಾಸಿಗೆ ಆಸ್ಪತ್ರೆ ವ್ಯವಸ್ಥೆ ಇದಾಗಿದ್ದು, ಮಕ್ಕಳಿಗೆ ಹಾಗೂ ಇತರೆ ವಿಭಾಗಕ್ಕೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಇಲ್ಲ, ಆದರೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಕಲ್ಪಿಸಿದೆ. ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಹುಲಿಗೆರೆಪುರ ರವಿ ಅವರು ಕುಷ್ಠರೋಗ ವಿಭಾಗಕ್ಕೆ ವ್ಯವಸ್ಥೆ ಆಗಿದೆಯ ಎಂದು ಕೇಳಿದ‌ ಮಾಹಿತಿಗೆ ಸದ್ಯ ಅಂತಹ ವ್ಯವಸ್ಥೆ ಇಲ್ಲ ಎಂದರು. ಜನರೇಟರ್ ವಿದ್ಯುತ್ ಕಡಿತವಾದಾಗ ಆಟೋಮ್ಯಾಟಿಕ್ ಆಗಿ ಆನ್ ಆಗುವ ವ್ಯವಸ್ಥೆ ಇಲ್ಲದ ಬಗ್ಗೆ ಅಜ್ಜಹಳ್ಳಿ ಬಸವರಾಜ್ ಗಮನ ಸೆಳೆದರು.

ಜನೌಷಧಿ ಕೇಂದ್ರ ಜನಸಾಮಾನ್ಯರಿಗೆ ಉಪಯೊಗವಾಗಿತ್ತು, ಸರ್ಕಾರ ಇದನ್ನ ಮುಚ್ಚಲು ಹೊರಟಿರುವ ಕ್ರಮ ಸರಿ‌ಯಲ್ಲ ಎಂದು ಕ.ಕ.ಜ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್ ಒತ್ತಾಯಿಸಿದರು. ಹಳೇ ಕಬ್ಬಿಣದ ವಿಲೇವಾರಿಗೆ ಕ್ರಮ ವಹಿಸಿ ಎಂದು ಲಕ್ಷ್ಮಣ್ ಆಗ್ರಹಿಸಿದರು.

ಶುಚಿತ್ವಕ್ಕೆ ಸಂಬಂಧಿಸಿ  ನೀರಿನ ವ್ಯವಸ್ಥೆ ಕೊರತೆ ಇದೆ, ಒಂದು ನೀರಿನ ಟ್ಯಾಂಕರ್ ಇದ್ದು ಮತ್ತೊಂದು ನೀರಿನ‌ ಟ್ಯಾಂಕ್ ಆಗತ್ಯ ಇದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆಗಾಗಿ ದಾನಿಗಳಿಂದ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ನಾನು ವೈಧ್ಯಾದಿಕಾರಿ ಆದಾಗ ಐದು ಜನ ವೈದ್ಯರು ಮಾತ್ರ ಇದ್ದರು, ಇವಾಗ ಹನ್ನೆರಡು ವೈದ್ಯರಿದ್ದಾರೆ.
ನರ್ಸ್ ಪೊಸ್ಟ್ ಮಂಜೂರಾತಿ ಹೆಚ್ಚಳ ಆಗಬೇಕಾಗಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ