Sunday, May 19, 2024

ಪ್ರಾಯೋಗಿಕ ಆವೃತ್ತಿ

ನಿಗೂಢ ಕಾಯಿಲೆಗೆ ಒಂದೇ ಮನೆಯಲ್ಲಿ 8 ಹಸುಗಳು ಸಾವು

ಶ್ರೀರಂಗಪಟ್ಟಣ ತಾಲ್ಲೂಕಿನ ಎ.ಹುಲ್ಲುಕೆರೆ ಗ್ರಾಮದಲ್ಲಿ ನಿಗೂಢ ಕಾಯಿಲೆಗೆ ಒಳಗಾಗಿ ಒಂದೆ ಮನೆಯಲ್ಲಿ ಕಳೆದ 15 ದಿನಗಳಿಂದೀಚೆಗೆ ಒಟ್ಟು 8 ರಾಸುಗಳು ಪ್ರಾಣ ಕಳೆದುಕೊಂಡಿವೆ.

ಗ್ರಾಮದ ಪುಟ್ಟಸ್ವಾಮಿ ಅವರಿಗೆ ಸೇರಿದ ಹಸುಗಳು ಸಾವಿಗೀಡಾಗಿವೆ, ಇದರಿಂದಾಗಿ ಒಟ್ಟು 4 ಲಕ್ಷ ರೂ.ಗಳಿಗಿಂತ ಹೆಚ್ಚು ನಷ್ಟ ಅನುಭವಿಸುವಂತಾಗಿದೆ.

‘ಕಳೆದ ಹದಿನೈದು ದಿನಗಳಿಂದೀಚೆಗೆ ಇದ್ದಕ್ಕಿದ್ದಂತೆ ಕೆಳಕ್ಕೆ ಬೀಳುವ ಹಸುಗಳು ಕೆಲವೇ ಗಂಟೆಗಳಲ್ಲಿ ಒದ್ದಾಡಿ ಸಾವನ್ನಪ್ಪುತ್ತಿದೆ, ಹಸುಗಳು ಬಿದ್ದ ತಕ್ಷಣ ಪಶು ವೈದ್ಯರಿಗೆ ಕರೆ ಮಾಡುತ್ತೇವೆ, ಆದರೆ ಅವರು ಬರುವ ವೇಳೆಗೆ ಹಸುಗಳು ಸತ್ತು ಹೋಗಿರುತ್ತದೆ. 2 ದಿನಗಳಿಗೊಮ್ಮೆ ಒಂದೆಂದು ಹಸುಗಳು ಸಾವನ್ನಪ್ಪುತ್ತಿದೆ. ವೈದ್ಯರಿಂದಲೂ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಲ್ಲ’ ಎಂದು ಗ್ರಾಮಸ್ಥರಾದ ಕಿರಣ್ ನುಡಿಕರ್ನಾಟಕ.ಕಾಂ ಗೆ ಮಾಡಿ ಮಾಹಿತಿ ನೀಡಿದ್ದಾರೆ.

4 ಹಾಲು ಕರೆಯುವ ಹಸುಗಳು, ಇವುಗಳಿಗೆ ಸೇರಿದ 2 ಕರುಗಳು ಹಾಗೂ ಹಳ್ಳಿಕಾರ್ ಜಾತಿಗೆ ಸೇರಿದ 2 ಉಳುಮೆ ಮಾಡುವ ಹಸುಗಳು ಹಸುನೀಗಿವೆ ಎಂದು ವಿವರಿಸಿದರು.

ಪತ್ತೆಯಾಗದ ಖಾಯಿಲೆ

ಸಾವನ್ನಪ್ಪಿರುವ ಹಸುಗಳಿಗೆ ಯಾವ ಕಾಯಿಲೆಗಳಿತ್ತು ಎಂಬುದನ್ನು ವೈದ್ಯರು ಇದುವರೆಗೆ ತಿಳಿಸಿಲ್ಲ, ಹಸುಗಳಿಗೆ ಸಂಬಂಧಿಸಿದ ಸ್ಯಾಂಪಲ್ ಗಳನ್ನು ಲ್ಯಾಬ್ ಗಳಿಗೆ ಕಳುಹಿಸಲಾಗಿದೆ, ಇನ್ನುಅದರ ವರದಿ ಬರಬೇಕಾಗಿದೆ. ಆದರೆ ಇದ್ದಕ್ಕಿದ್ದಂತೆ ಜಾರುವಾರುಗಳು ಸಾವನ್ನಪ್ಪುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಾನುವಾರುಗಳು ಸಾವಿಗೆ ಕಾರಣವಾದ ವಿಷಯವನ್ನು ಪತ್ತೆ ಹಚ್ಚಿ, ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!