ಶಿವಸುಂದರ್
ಮೋಜನ್ನು , ಜೂಜನ್ನು
ಗೀಳಾಗಿಸುವುದು..
ಗೀಳಿನ ಮೋಹಕತೆಯು
ಬದುಕಿನ ಬವಣೆಗಳನ್ನು,
ಅದರ ಕಾರಣಗಳನ್ನು ಮರೆಸುವುದು…
ಆಳುವರ ಹಳೆಯ ತಂತ್ರ.
ಆದರೆ..
ನಿತ್ಯ ಗೀಳನ್ನು ನಾಗರಿಕ
ಜೀವನಶೈಲಿಯಾಗಿಸಿದ್ದು..
ಬ್ರಾಮಕ ಮೋಹಕತೆಯನ್ನು
ಸಾವಿರ ಕೋಟಿ
ಲಾಭವಾಗಿಸಿಕೊಂಡಿದ್ದು…
ಅವರಲ್ಲಿ
“ನಾವು” ಇಲ್ಲದಿದ್ದರೂ
ಕಪ್ಪು ನಮ್ಮದೇ ಎಂದು
ಭ್ರಮಿಸುವಂತೆ ಮಾಡಿದ್ದು..
ನಮ್ಮನ್ನು ಸೋಲಿಸಿದ
ಅವರ ಗೆಲುವನ್ನು
ನಾವೇ ಮೆರೆಸುವಂತೆ ಮಾಡಿದ್ದು..
ಕಾರ್ಪೊರೇಟ್ ಬಂಡವಾಳಶಾಹಿಯ
ವಿನಾಶಕಾರಿ ಸೃಜನಶೀಲತೆ ..
ಆಲ್ ರೈಟ್ ..
ಮುಂದಕ್ಕೆ ಹೋಗೋಣ.
ಅಂದಹಾಗೆ ..
ಮುಂದಿನ IPL ಯಾವಾಗ ?
ಮುಂದಿನ ವರ್ಷವೂ
ಕಪ್ ನಮ್ಮದೇ ..
ಆದರೆ ಗೆಲುವು ?




