ಮದ್ದೂರು ತಾಲ್ಲೂಕಿನ ಶಿವಪುರದ ಐತಿಹಾಸಿಕ ಧ್ವಜ ಸತ್ಯಾಗ್ರಹ ಸೌಧದಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ನೆಲದಲ್ಲಿ ಒಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ಕಾಲೇಜು ವಿಧ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವೇಳೆ 1938 ರಲ್ಲಿ ನಡೆದ ಶಿವಪುರ ದ್ವಜ ಸತ್ಯಾಗ್ರಹ ಹೋರಾಟದ ಬಗ್ಗೆ ಮಾಹಿತಿ ನೀಡಲಾಯಿತು. ಟಿ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ತಿರುಮಲಗೌಡ ಅವರು ತಮ್ಮ ಸ್ವಂತ ಎಂಟು ಎಕರೆ ಜಮೀನು ದಾನವಾಗಿ ನೀಡಿದ್ದರು. ಅಂದಿನ ಧ್ವಜ ಸತ್ಯಾಗ್ರಹ ಕಾರ್ಯಕ್ರಮದ ವೇಳೆ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಇತಿಹಾಸ ಪುಟದ ಭಾಗವಾದರು ಎಂದು ವಿವರಿಸಿದರು.
ಬ್ರಿಟಿಷ್ ಸರ್ಕಾರ ಏನೇ ಅಡೆತಡೆ ಒಡ್ಡಿದರೂ ಜನರೆಲ್ಲ ಒಗ್ಗೂಡಿ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಕೆ.ಬಿ.ವಹಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪರಿಚಯವನ್ನು ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್ ಶಿವರಾಮು ಮಾಡಿಕೊಟ್ಟರಲ್ಲದೆ ವಿದ್ಯಾರ್ಥಿಗಳಿಗೆ ಶಿವಪುರ ಇತಿಹಾಸ ಪುಟದಲ್ಲಿ ನಡೆದ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಕಾರ್ಯಕ್ರಮದ ವೇಳೆ ಸಹಾಯಕ ಪ್ರಾಧ್ಯಾಪಕರಾದ ಡಾ. ವಿ ಶಿವಕೀರ್ತಿ , ವೈ.ಕೆ. ಭಾಗ್ಯ , ಕೆ ಲೋಕೇಶ್ ,ಕೃಷ್ಣೇಗೌಡ ಭಾಗವಹಿಸಿದ್ದರು.




