ಐಪಿಎಲ್ -2025ರ ಸರಣಿಯಲ್ಲಿ ಆರ್.ಸಿ.ಬಿ ತಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡು ಅಸ್ವಸ್ಥರಾಗಿದ್ದರು, ಈ ಪೈಕಿ ಐವರು ಅಭಿಮಾನಿಗಳು ಸಾವಿಗೀಡಾಗಿರುವ ಮಾಹಿತಿ ಲಭ್ಯವಾಗಿದೆ.
ವಿಧಾನಸೌಧದ ಬಳಿ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾರಿಚಾರ್ಜ್ ನಡೆಸಿದ್ದಾರೆ.
BIG BREAKING: Two people, including a child, died in a stampede at Chinnaswamy Stadium during the RCB victory parade. As per reports, over 40 people have been injured so far, with 7 in critical condition and fighting for their lives #RCB #Bengaluru
#Bengaluru #RCB #RCBvPBKS… https://t.co/TWqMnleyQB pic.twitter.com/ujRRH5y7S7
— Indian Observer (@ag_Journalist) June 4, 2025
“>
ಒಂದು ಕಡೆ ವಿಧಾನಸೌಧದ ಬಳಿ ಅಭಿಮಾನಿಗಳು ಜಮಾಯಿಸಿದರೆ ಇನ್ನೊಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರೀ ಪ್ರಮಾಣದ ಅಭಿಮಾನಿಗಳು ಜಮಾಯಿಸಿದ್ದಾರೆ. ಇದರಿಂದ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾರಿಚಾರ್ಜ್ ನಡೆಸಿದ್ದಾರೆ.
ಐಪಿಎಲ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಗೆಲುವು ಸಾಧಿಸಿ ಐಪಿಎಲ್ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.




