Friday, November 20, 2026

ಪ್ರಾಯೋಗಿಕ ಆವೃತ್ತಿ

ಬಕ್ರೀದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ : ಚಲುವರಾಜು

ಇದೇ ಜೂನ್ 07ರ ಶನಿವಾರ ದೇಶಾದ್ಯಂತ ಆಚರಿಸುತ್ತಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂದವರು ಸಂತೋಷದಿಂದ ಆಚರಿಸಿ ನಾಡಿಗೆ ಸೌಹಾರ್ದತೆಯ ಸಂದೇಶ ನೀಡಬೇಕು ಎಂದು ನಾಗಮಂಗಲ ಡಿವೈಎಸ್ ಪಿ ಚಲುವರಾಜು ಅವರ ಅಧ್ಯಕ್ಷತೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ತಾಲೂಕಿನ ಹಿಂದೂ ಮುಸ್ಲಿಂ ಭಾಂದವರ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಮು ಸೌಹಾರ್ದತೆಗೆ ಕೃಷ್ಣರಾಜಪೇಟೆ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಮುಸ್ಲಿಂ ಬಾಂಧವರು ಆಚರಿಸುವ ಹಬ್ಬದಲ್ಲಿ ಹಿಂದೂಗಳು ಭಾಗವಹಿಸಿ ನಾಡಿಗೆ ಸೌಹಾರ್ದತೆಯ ಸಂದೇಶ ನೀಡಬೇಕು. ಗಾಳಿ ಸುದ್ದಿಗೆ ಕಿವಿಗೊಡದೆ ಯಾವುದೇ ಸುದ್ದಿಯನ್ನು ಪರಾಮರ್ಶೆ ನಡೆಸಿ ಪ್ರಾಮಾಣಿಸಿ ನೋಡಬೇಕು. ಸಮಾಜಘಾತುಕ ಶಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ನಾಗಮಂಗಲ ಡಿವೈಎಸ್ ಪಿ ಚಲುವರಾಜು ಮನವಿ ಮಾಡಿದರು.

ಪುರಸಭೆ ಸದಸ್ಯ ಡಿ. ಪ್ರೇಮಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸುಮಾರಾಣಿ, ಆನಂದೇಗೌಡ, ರೇವತಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಗೌಸ್ ಖಾನ್, ಸೌದಿ ಫಯಾಜ್, ಸೈಯ್ಯದ್ ಖಲಿಲ್, ಚಾಂದ್ ಬೈಯ್ಯಾ, ಫಯಾಜ್, ನಾವಿದ್ ಅಹಮದ್, ಅಫಸರ್ ಅಹಮದ್, ನವಿದ್ ಅಹಮದ್, ಕರವೇ ತಾಲೂಕು ಅಧ್ಯಕ್ಷ ಟೆಂಪೋ ಶ್ರೀನಿವಾಸ್, ದಡದಹಳ್ಳಿ ಅತಿಕ್ ಅಹಮದ್, ಮಾಂಬಳ್ಳಿ ಜಯರಾಮ್, ಹೊಸಹೊಳಲು ರತ್ನ, ಶಿವಪ್ರಸಾದ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ