Sunday, November 22, 2026

ಪ್ರಾಯೋಗಿಕ ಆವೃತ್ತಿ

“ಒಂದು ಭೂಮಿ ಒಂದು ಆರೋಗ್ಯ” ಘೋಷ ವಾಕ್ಯದಡಿ ಯೋಗದಿನ ಆಚರಣೆ : ಡಾ.ಕುಮಾರ

ಯೋಗದಿಂದ ಆರೋಗ್ಯ ವೃದ್ಧೊಯಾಗುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳಸುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಜೂನ್ 21 ರಂದು ನಡೆಯುವ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.

ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ ಒಂದು ಆರೋಗ್ಯ” ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆ ಎಂದರು.

ಈ ಬಾರಿ “ಹಸಿರು ಯೋಗ” ಮತ್ತು ಯೋಗ ಧನುಷ್ ಕಾರ್ಯಕ್ರಮವನ್ನು ಸಹ ಆಯೋಜಿಸಬೇಕಿದ್ದು, ಹಸಿರು ಯೋಗವನ್ನು ಆರಣ್ಯ ಇಲಾಖೆಯ ಸಹಕರದೊಂದಿಗೆ ಯೋಗ ಮುಗಿದ ನಂತರ ಗಿಡ ನೆಡುವ ಮೂಲಕ ಆಯೋಜಿಸಿ ಎಂದರು.

ಯೋಗ ಧನುಷ್ ‘Y Break Yoga App ಮೂಲಕ ಕೆ.ಎಸ್.ಆರ್. ಟಿ.ಸಿ ನೌಕರರಿಗೆ, ಖೈದಿಗಳಿಗೆ, ದಿವ್ಯಾಂಗರಿಗೆ, ವಾಣಿಜ್ಯ ಕೈಗಾರಿಕೆಗಳ ಕಾರ್ಮಿಕರಿಗೆ ಸೇರಿದಂತೆ ಹೆಚ್ಚಿನ ಜನರಿಗೆ ಯೋಗವನ್ನು ತಲುಪಿಸಲು 10-15 ನಿಮಿಷಗಳ ಯೋಗ ಕಾರ್ಯಕ್ರಮವನ್ನು ರೂಪಿಸಲಾಗಿದೆ.ಇದರಲ್ಲಿ ಮದ್ದೂರು ಭಾಗದ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಮಿಕರಿಗೆವ ವಿಶೇಷವಾಗಿ ಆಯೋಜಿಸಿ ಎಂದರು.

ಜೂನ್ 21 ರಂದು ಯೋಗಾಭ್ಯಾಸವನ್ನು ಪಿ.ಇ.ಟಿ ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ನಿಗದಿತ ಸಮಯಕ್ಕೆ ನಡೆಯುವಂತೆ ಸಂಘಟಿಸಬೇಕು. ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಲ್ಲರೂ ಆಗಮಿಸಬೇಕು ಬೆಳಿಗ್ಗೆ 6-30 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗುವ ರೀತಿ ಕಾರ್ಯಕ್ರಮವನ್ನು ಯೋಜಿಸಿ ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ಯೋಗ‌ಶಾಲೆಗಳು ಸೇರಿದಂತೆ 6000 ಕ್ಕೂ ಹೆಚ್ಚಿನ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ರೀತಿ ಕಾರ್ಯಕ್ರಮ ಸಂಘಟಿಸಿ ಎಂದು ಹೇಳಿದರು.

5 ಜನ ಯೋಗ ಶಿಕ್ಷಕರನ್ನು ಮೇಲುಸ್ತುವಾರಿಗಳಾಗಿ ನೇಮಿಸಿ ಅವರು ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರಿಗೆ ಎರಡು ಅಥವಾ ಮೂರು ದಿನಗಳ ಕಾಲ ಪೂರ್ವಾಭ್ಯಾಸ ನೀಡಲಿ. ಇದರಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ. ಕಾರ್ಯಕ್ರಮದ ದಿನದಂದು ದೈಹಿಕ ಶಿಕ್ಷಕರಿಗೆ ಜವಾಬ್ದಾರಿ ನೀಡಿ ಯೋಗ ದಿನಾಚರಣೆಯಂದು ಸರಿಯಾದ ಕ್ರಮದಲ್ಲಿ ಸಾಲು ನಿಲ್ಲಿಸಲು ಸೂಚಿಸಿ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಹಾಗೂ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಸೇವೆ, ಪ್ರಥಮ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ ಮೀರಾ ಶಿವಲಿಂಗಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ