Thursday, November 19, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲಾಡಳಿತದ ಭರವಸೆ ಮೇರೆಗೆ ಕಾಳಪ್ಪ ಬಡಾವಣೆ ನಿವಾಸಿಗಳ ಪಾದಯಾತ್ರೆ ಅಂತ್ಯ

ಕಾಳಪ್ಪ ಬಡಾವಣೆಯ ಜಾಗವನ್ನು ಸ್ಲಂ ಎಂದು ಘೋಷಿಸಿ ಅಂತಿಮ ಡಿಕ್ಲರೇಷನ್ ಹೊರಡಿಸಬೇಕು ಹಾಗೂ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕಳೆದ 6 ದಿನಗಳಿಂದ ಹೋರಾಡುತ್ತಿದ್ದ ಮಂಡ್ಯದ ಶ್ರಮಿಕರಿಗೆ ಮೊದಲ ಹಂತದ ಜಯ ಸಿಕ್ಕಿದೆ.

ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ತಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 21 ರಂದು ಕೆ.ಆರ್. ಪೇಟೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಪಾದಯಾತ್ರೆ ಹೊರಟಿದ್ದ ಪ್ರತಿಭಟನಾಕಾರನ್ನು ಪಾಂಡವಪುರದಲ್ಲಿ ಭೇಟಿ ಮಾಡಿ ಸಭೆ ನಡೆಸಿದ ಯೋಹನಾ ನಿರ್ದೇಶಕಿ ತುಷಾರಮಣಿ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಹರೀಶ್, ಎಇಇ ದರ್ಶನ್ ಅವರು ಜುಲೈ.26 ರೊಳಗೆ ಸ್ಲಂ ಎಂದು ಘೋಷಿಸಿ ಅಂತಿಮ ಡಿಕ್ಲರೇಷನ್ ಹೊರಡಿಸಲು ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಜುಲೈ 26ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದರು.ಕೊಳಚೆ ಅಭಿವೃದ್ಧಿ ಮಂಡಳಿಯ ಯೋಜನಾ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು ಮತ್ತು ಪುರಸಭೆ ಅಧಿಕಾರಿಗಳು ಬಂದು ಕಾಳಪ್ಪ ಬಡಾವಣೆಯ ಮತ್ತು ಇನ್ನಿತರ ಶ್ರಮಿಕನಗರಗಳ (ಸ್ಲಂಗಳ) ಎಲ್ಲ ಸಮಸ್ಯೆಗಳನ್ನೂ ಚರ್ಚಿಸಲು ಜಿಲ್ಲಾಧಿಕಾರಿ ಕಛೇರಿಯಿಂದ ಕರೆಯಲಾಗಿರುವ ಸಭೆಯ ತಿಳುವಳಿಕೆ ಪತ್ರವನ್ನು ನೀಡಿದರು.

ಅದೇ ರೀತಿ ಅಂತಿಮ ಘೋಷಣೆ ಹೊರಡಿಸಲು ಮತ್ತು ಹಕ್ಕುಪತ್ರ ನೀಡಲು ಪ್ರಕ್ರಿಯೆಯನ್ನು ಈ ತಕ್ಷಣದಿಂದಲೇ ಆರಂಭಿಸುವುದಾಗಿಯೂ ಹತ್ತು ದಿನದ ಒಳಗಾಗಿ ಮುಗಿಸುವುದಾಗಿಯೂ ಲಿಖಿತ ಪತ್ರ ನೀಡಿದರು.‌ಇದಾದ ನಂತರ ಶ್ರಮಿಕ ನಿವಾಸಿಗಳು ತಮ್ಮ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, 10 ದಿನಗಳಲ್ಲಿ ಭರವಸೆಗಳು ಈಡೇರದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ಅಧ್ಯಕ್ಷ ಕೃಷ್ಣ ಪ್ರಕಾಶ್, ಸಿದ್ದರಾಜು,ಎನ್.ನಾಗೇಶ್ ಪೂರ್ಣಿಮಾ, ಕಮಲ,ಜ್ಯೋತಿ, ಅಂಜಲಿ, ಶಿಲ್ಪ ,ಸುಬ್ರಹ್ಮಣ್ಯ, ಕಾಳಪ್ಪ ಬಡಾವಣೆಯ ಮುಖಂಡರಾದ ಆರ್ಮುಗಂ,ನಾಗೇಶ್,ತುಳಸಮ್ಮ ಅಂಜಲಿ,ಶಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ನೂರಾರು ಶ್ರಮಿಕ ನಿವಾಸಿಗಳು ಪಾದಯಾತ್ರೆಯಲ್ಲಿದ್ದು,ಅಧಿಕಾರಿಗಳ ಭರವಸೆಯ ಮೇರೆಗೆ ಮುಕ್ತಾಯಗೊಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ