ಮದ್ದೂರು ತಾಲ್ಲೂಕಿನ ಎಸ್.ಐ .ಹೊನ್ನಲಗೆರೆಯಲ್ಲಿ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನ ನಿರ್ಮಾಣವಾಗಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು.
ದೇವಿಗೆ ರೇಷ್ಮೆಸ ಸೀರೆಯಿಂದ ಶೃಂಗರಿಸಿ ಅಲಂಕರಿಸಲಾಗಿತ್ತು.ಭಕ್ತಾದಿಗಳು ಸಂಭ್ರಮದಿಂದ ಚಾಮುಂಡೇಶ್ವರಿ ದೇವಿಯ ವರ್ಧಂತಿ ಆಚರಣೆ ಮಾಡಿ ಪುನೀತರಾದರು.
ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.




