Friday, November 20, 2026

ಪ್ರಾಯೋಗಿಕ ಆವೃತ್ತಿ

ಪಲ್ಸ್ ಪೋಲಿಯೋ ನಿರ್ಮೂಲನೆಗೆ ರೋಟರಿ ಸಂಸ್ಥೆ ಕೊಡುಗೆ ಅಪಾರ : ಮಹದೇವಪ್ರಸಾದ್

ಜಾಗತಿಕವಾಗಿ ಪಲ್ಸ್ ಪೋಲಿಯೋ ನಿರ್ಮೂಲನೆಗೆ ಅಂತರಾಷ್ಟ್ರೀಯ  ರೋಟರಿ ಸಂಸ್ಥೆ ಕೊಡುಗೆ ಅಪಾರ ಎಂದು ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಜಿಲ್ಲಾ ಪಾಲಕ ಎನ್.ಎಸ್.ಮಹದೇವಪ್ರಸಾದ್ ಹೇಳಿದರು.

ಮಂಡ್ಯ ನಗರದ ರೈತರ ಸೊಸೈಟಿ ಆವರಣದ ಶಾಮಿಯಾನ ಮಾಲೀಕರ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಜಿಲ್ಲೆ ೩೧೯೨, ಮತ್ತು ರೋಟರಿ ಸಂಸ್ಥೆ ಮಂಡ್ಯ ಆಯೋಜಿಸಿದ್ದ ಜಿಲ್ಲಾ ಪಾಲಕರ ಅಧಿಕೃತ ಭೇಟಿ ಮತ್ತು ಸೇವಾ ಕಾರ್ಯ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಟರಿಯ ಮುಖ್ಯಧ್ಯೇಯ ಸೇವೆ ಮತ್ತು ಸ್ನೇಹವಾಗಿದೆ, ಪ್ರಪಂಚದ ೨೦೧ದೇಶಗಳಲ್ಲಿ ಪಲ್ಸ್ ಪೋಲಿಯೋ ನಿರ್ಮೂಲನೆಯಾಗಿದೆ, ಜಾಗತೀಕ ಸಮಸ್ಯೆಗಳಿಗೆ ಸೂಕ್ತರೀತಿಯಲ್ಲಿ ಸ್ಪಂದಿಸಿ ಸೇವೆ ಮಾಡುವುದು ರೋಟಿರಿಯನ್ಸ್ಗಳ ಸೇವಾಕಾರ್ಯವಾಗಿದೆ ಎಂದು ನುಡಿದರು.

ಇಂದು ಜಿಲ್ಲಾ ಪಾಲಕರ ಅಧಿಕೃತ ಭೇಟಿ ಸೇವಾಕಾರ್ಯದಲ್ಲಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದೇವೆ, ನಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿ ೧೬೦೦ಮಂದಿ ಸದಸ್ಯರಿದ್ದು, ೫ ಜಿಲ್ಲೆಗೆ ಒಬ್ಬ ಜಿಲ್ಲಾ ಪಾಲಕರಾಗಿರುತ್ತಾರೆ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ ಕಂದಾಯ ಜಿಲ್ಲೆಗಳು ಬರುತ್ತವೆ, ಇಲ್ಲಿ ಸೇವಾಚಟುವಟಿಕೆಗಳು ಯಶಸ್ಸಿಯಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ವಲಯಪಾಲಕ ಸಿ.ಪ್ರಶಾಂತ್, ಸಹಾಯಕಪಾಲಕ ಶೇಕ್ ಅಹಮದ್, ಶ್ರೀರಂಗಪಟ್ಟಣ ರೋಟರಿ ಸಂಸ್ಥೆ ಅಧ್ಯಕ್ಷ ಮಂಜುರಾವ್, ಕಾರ್ಯದರ್ಶಿ ಡಾ.ರಾಘವೇಂದ್ರ, ಮಂಡ್ಯ ರೋಟರಿ ಅಧ್ಯಕ್ಷ ಎನ್.ಆರ್.ರಾಜೇಶ್, ಹಿರಿಯ ಸದಸ್ಯ ಎ.ಸಿ.ರಮೇಶ್, ಮಂಜುನಾಥ್, ಲೋಕೇಶ್, ಶರತ್, ರಾಜಶೇಖರ್, ಸೋಮೇಗೌಡ, ಸರಸ್ವತಮ್ಮ, ಗಾಯಿತ್ರಿ, ಹೊನ್ನೇಗೌಡ, ಮದ್ದೂರು ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್, ಸಹಾಯಕ ಪಾಲಕ ಬರ್ನಾಡಪ್ಪ, ಅನುಪಮಾ, ಲಕ್ಷ್ಮಿ ನಾರಾಯಣ್, ನಾಗೇಂದ್ರ, ಶ್ರೀಧರ್ ಹಾಗೂ ಸೋಮಶೇಖರ್ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ