Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜೂ.27 ಕ್ಕೆ ‘ಸಿಜಿಕೆ ಬೀದಿರಂಗ ದಿನ’ ಕಾರ್ಯಕ್ರಮ

ಕರ್ನಾಟಕ ಬೀದಿನಾಟಕ ಅಕಾಡೆಮಿ, ಕರ್ನಾಟಕ ಸಂಘ, ಅನಿಕೇತನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ `ಸಿಜಿಕೆ ಬೀದಿರಂಗ ದಿನ’ ಕಾರ್ಯಕ್ರಮವನ್ನು ಜೂನ್ 27ರ ಬೆಳಿಗ್ಗೆ 10.30ಕ್ಕೆ ಮಂಡ್ಯ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿಯ ಸಂಘಟಕ ಸಂಸ ಸುರೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಜಿಕೆ ರಂಗದಿನ ಕಾರ್ಯಕ್ರಮದಲ್ಲಿ ಸಿಜಿಕೆ ರಂಗ ಪುರಸ್ಕಾರ, ಹೋರಾಟದ ಹಾಡುಗಳು ಹಾಗೂ `ನೀಗಿಕೊಂಡ ಸಂಸ’ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಲಲಿತ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿ, ೨೦೨೧ನೇ ಸಾಲಿನ ಹುರುಗಲವಾಡಿ ರಾಮಯ್ಯ, ೨೦೨೨ನೇ ಸಾಲಿನ ಎಂ.ಬಾಲಕೃಷ್ಣ, ೨೦೨೩ನೇ ಸಾಲಿನ ವಳಗೆರೆಹಳ್ಳಿ ಲೋಕೇಶ್, ೨೦೨೪ನೇ ಸಾಲಿನ ಅಶ್ವಥ ನಾರಾಯಣ ಪಾಂಡವಪುರ, ೨೦೨೫ನೇ ಸಾಲಿನ ಮಂಜುಳಾ ಆಲದಹಳ್ಳಿ ಅವರಿಗೆ ಐದು ವರ್ಷಗಳ ಸಿಜಿಕೆ ರಂಗಪುರಸ್ಕಾರ ಪುರಸ್ಕೃತ ನೀಡುವರು ಎಂದು ಹೇಳಿದರು.

ಅತಿಥಿಗಳಾಗಿ ಕರ್ನಾಟಕ ರಂಗ ಪರಿಷತ್ತಿನ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಸಿ.ಎಂ.ನರಸಿಂಹಮೂರ್ತಿ, ರಂಗ ಸಂಘಟಕ ಕೆ.ಆರ್.ಗೋಪಾಲಕೃಷ್ಣ, ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ, ಚಿತ್ರಕಲಾವಿದ ಕೃಷ್ಣರಾಯಚೂರ್ ಭಾವಹಿಸಲಿದ್ದಾರೆ. ಬೆಂಗಳೂರು ಏಷಿಯನ್ ಥಿಯೇಟರ್ ಅಭಿನಯಿಸುವ `ನೀಗಿಸಿಕೊಂಡ ಸಂಸ’ ನಾಟಕವು ಏಕವ್ಯಕ್ತಿ ಪ್ರದರ್ಶಿತ ನಾಟಕವಾಗಿದ್ದು, ಕೆ.ರಂಗಸ್ವಾಮಿ ಪ್ರದರ್ಶಿಸಲಿದ್ದು, ಕಿರಂ ನಾಗರಾಜ ರಚಿಸಿದ್ದಾರೆ, ಸಿದ್ದರಾಮ ಕೊಪ್ಪರ್ ನಿರ್ದೇಶಿಸಿದ್ದು, ಬೆಂಗಳೂರಿನ ಸಂಸ ಥಿಯೇಟರ್ ನಿರ್ವಹಿಸಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್, ಜಯರಾಮ, ಹುರುಗಲವಾಡಿ ರಾಮಯ್ಯ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ