Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಾಳೆ “ವರ್ತಮಾನದಲ್ಲಿ ಜನಪದ ವೈದ್ಯ” ಕುರಿತು ವಿಚಾರ ಸಂಕಿರಣ

ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಮಂಡ್ಯ ವಿಶ್ವವಿದ್ಯಾನಿಲಯ ಮಂಡ್ಯ, ಕರ್ನಾಟಕ ಸಂಘ ಮಂಡ್ಯ, ಜಾನಪದ ಜನ್ನೆಯರು ಸಂಸ್ಥೆ ಮಂಡ್ಯ ಇವರ ಸಹಯೋಗದಲ್ಲಿ ಜೂ.26 ರಂದು ಮಂಡ್ಯ ವಿ.ವಿ ಸಿಂಡಿಕೇಟ್ ಸಭಾಂಗಣದಲ್ಲಿ “ನಾಟಿ ಮದ್ದು ನಾಡಿಗೇ ಒಳ್ಳೇದು” ಎಂಬ ಘೋಷವಾಕ್ಯದಡಿಯಲ್ಲಿ “ವರ್ತಮಾನದಲ್ಲಿ ಜನಪದ ವೈದ್ಯ “ಎಂಬ ವಿಷಯವನ್ನು ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಲಿದೆ.

ವಿಚಾರ ಸಂಕಿರಣವನ್ನು ಶಾಸಕ ರವಿಕುಮಾರ್ ಗೌಡ  ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅಧ್ಯಕ್ಷತೆ ವಹಿಸುವರು. ಮಂಡ್ಯ ವಿ.ವಿ ಕುಲಪತಿ ಪ್ರೊ. ಕೆ. ಶಿವಚಿತ್ತಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಕುಲಸಚಿವ ವೀಣಾ, ಡಾ.ಯೋಗಾನರಸಿಂಹಾಚಾರಿ, ಜಾನಪದ ಜನ್ನೆಯರು ಸಂಸ್ಥೆಯ ಅಧ್ಯಕ್ಷರಾದ ಡಾ. ಮಂಗಳಾ ಎಸ್ ಸಿ, ಅಕಾಡೆಮಿ ಸದಸ್ಯರಾದ ಡಾ.ಕೆಂಪಮ್ಮ ಸಹಪಾಧ್ಯಪಕರಾದ ದಿಲ್ ಷಾದ್ ಬೇಗಂ, ಜಿ ಉಷಾರಾಣಿಮ ಕರ್ನಾಟಕ ಸಂಘದ ಕಾರ್ಯದರ್ಶಿ ಹರೀಶ್ ಕುಮಾರ್, ಲೋಕೇಶ್ ಚಂದಗಾಲು ಉಪಸ್ಥಿತರಿರುವರು.

ಸಂಪನ್ಮೂಲಗಳ ವ್ಯಕ್ತಿಗಳಾಗಿ ನಾಟಿ ವೈದ್ಯರಾದ ಮಂಡ್ಯ ಹೊಳಲು ಗ್ರಾಮದ ಈಶ್ವರ್ ಕುಮಾರ್, ಚನ್ನಪಟ್ಟಣದ ಕೆ ಟಿ ಲಕ್ಷ್ಮಮ್ಮ ಅವರು “ಆರೋಗ್ಯ ಮತ್ತು ನಾಟಿ ವೈದ್ಯ”, “ಬಂಜೆತನ ನಿವಾರಣೆಯಲ್ಲಿ ನಾಟಿ ವೈದ್ಯ” ವಿಷಯಗಳ ಕುರಿತು ವಿಚಾರ ಮಂಡನೆ ಮಾಡುವವರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಖ್ಯಾತ ಜಾನಪದ ವಿದ್ವಾಂಸ ಡಾ. ಡಿ.ಕೆ ರಾಜೇಂದ್ರ ವಹಿಸಲಿದ್ದು, ವಿದ್ವಾಂಸ ವ.ನಂ.ಶಿವರಾಮು ಪ್ರಾಸ್ತಾವಿಕ ನುಡಿ ನುಡಿಯುವರು. ಸಮಾರೋಪ ನುಡಿಗಳನ್ನು ಖ್ಯಾತ ಜಾನಪದ ವಿದ್ವಾಂಸ ಡಾ. ರಾಗೌ ಅವರು ನುಡಿಯಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಡಾ. ಜಯಪ್ರಕಾಶಗೌಡ ವಹಿಸುವರು ಎಂದು ಕಾರ್ಯಕ್ರಮದ ಆಯೋಜಕರಾದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಡಾ.ಕೆಂಪಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ