ಹನಿಯಂಬಾಡಿ ಜಗದೀಶ್
ಕೇರಳದ ವಯನಾಡ್ ಹಾಗೂ ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶನಿವಾರ (ಜೂ.28) ಬೆಳಿಗ್ಗೆ 8 ಗಂಟೆಗೆ ವೇಳೆ ಒಳಹರಿವಿನ ಪ್ರಮಾಣ 73,811 ತಲುಪಿದೆ.
ಜೂ.30ರ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದು, ಈ ಸಂದರ್ಭದಲ್ಲಿ ನೀರಿನ ಮಟ್ಟವನ್ನು ಗರಿಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳಲು ನೀರಿನ ಸಂಗ್ರಹದತ್ತ ಹೆಚ್ಚು ಗಮನ ಹರಿಸಲಾಗಿದೆ.
ನಿನ್ನೆಯಷ್ಟೆ 50 ಸಾವಿರ ಕ್ಯೂಸೆಕ್ ಹೆಚ್ಚು ನೀರನ್ನು ಹೊರಕ್ಕೆ ಬಿಡಲಾಗುತ್ತಿತ್ತು. ಆದರೆ ಅದರ ಪ್ರಮಾಣವನ್ನು ಶನಿವಾರ ಮುಂಜಾನೆ ವೇಳೆಗೆ 38.932 ಕ್ಯೂಸೆಕ್ ಗೆ ಇಳಿಕೆ ಮಾಡಲಾಗಿದೆ.
ಕೆ.ಆರ್.ಎಸ್ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 124.80 ಅಡಿ
ಇಂದಿನ ಮಟ್ಟ : 123.25 ಅಡಿ
ಗರಿಷ್ಟ ಸಂಗ್ರಹ ಸಾಮರ್ಥ್ಯ : 49.452 ಟಿ.ಎಂ.ಸಿ
ಇಂದಿನ ಸಂಗ್ರಹ : 47.311 ಟಿ.ಎಂ.ಸಿ
ಒಳ ಹರಿವು : 73,811 ಕ್ಯೂಸೆಕ್ಸ್
ಹೊರ ಹರಿವು :38,983 ಕ್ಯೂಸೆಕ್ಸ್
ಪ್ರವಾಹ ಎಚ್ಚರಿಕೆ
ಕೆ.ಆರ್.ಎಸ್ ನಿಂದ ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಯ ಬಿಟ್ಟಿರುವುದಿರಂದ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ನದಿ ಪಾತ್ರದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದ್ದು, ಹಲವು ಪ್ರವಾಸಿ ಸ್ಥಳಗಳಿಗೆ ನಿಷೇಧಾಜ್ಞೆ ಹೇರಲಾಗಿದೆ.




