ಪಾಂಡವಪುರ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಬೆಳ್ಳಾಳೆ ಜಿಜೆಸಿ ಪ್ರೌಢಶಾಲೆ ಶಿಕ್ಷಕ ಕೇಶವಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು ಎಂಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಇಂದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಕೇಶವಮೂರ್ತಿ, ಉಪಾಧ್ಯಕ್ಷರಾಗಿ ಆರ್.ಕೃಷ್ಣೇಗೌಡ, ಕಾರ್ಯದರ್ಶಿಯಾಗಿ ಜೆ.ವಿಜಯಕುಮಾರ್, ಖಜಾಂಚಿಯಾಗಿ ಎಸ್.ಚಂದ್ರಯ್ಯ, ಸಹ ಕಾರ್ಯದರ್ಶಿಯಾಗಿ ಎಂ.ಬಿ.ಉಗ್ರೇಗೌಡ, ರಾಜ್ಯ ಪರಿಷತ್ ಸದಸ್ಯರಾಗಿ ಎಂ.ಜಯರಾಮ್ ಹಾಗೂ ನಿರ್ದೇಶಕರಾಗಿ ಆರ್.ಸಿ.ನಾಗೇಗೌಡ, ಎ.ಬಿ.ಚಿಕ್ಕಬಸಪ್ಪ ಅವರು ಪದಾಧಿಕಾರಿಗಳಾಗಿ ಅವಿರೋಧ ಆಯ್ಕೆಯಾದರು.ಚುನಾವಣೆ ಅಧಿಕಾರಿಯಾಗಿ ಶಿವರಾಜು ಕರ್ತವ್ಯ ನಿರ್ವಹಿಸಿದ್ದರು.
ನೂತನ ಅಧ್ಯಕ್ಷ ಕೇಶವಮೂರ್ತಿ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಶಿಕ್ಷಕ ವರ್ಗ, ಆತ್ಮೀಯ ಬಳಗ ಹಾಗೂ ಹಿತೈಷಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿ, ಶುಭ ಕೋರಿದರು.
ನೂತನ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಪಾಂಡವಪುರ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಸಹಕಾರದಿಂದ ಶಿಕ್ಷಕರ ಕ್ಷೇತ್ರಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಂಡವಪುರ ಶಿಕ್ಷಕರ ಕ್ಷೇತ್ರದ ಮುಖಂಡರಾದ ಯತೀಂದ್ರಕುಮಾರ್, ಚಲುವರಾಜು, ಚಂದ್ರಶೇಖರ್, ಕರುಣಾ, ಮಂಜು, ಮಧು, ಶ್ರೀನಿವಾಸ್ ಸೇರಿದಂತೆ ಅನೇಕ ಶಿಕ್ಷಕರು ಪಾಲ್ಗೊಂಡಿದ್ದರು.