Saturday, November 21, 2026

ಪ್ರಾಯೋಗಿಕ ಆವೃತ್ತಿ

ಪ್ರೊ. ಜೆ.ಪಿ ಗೆ ಜನಪದ ಕಲಾವಿದರಿಂದ ಅಭಿನಂದನೆ

ಮಂಡ್ಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಕರ್ನಾಟಕ ಸಂಘದ ಪ್ರೊ.ಜಯಪ್ರಕಾಶ ಗೌಡರನ್ನು ಮಂಡ್ಯ ಜಿಲ್ಲಾ ಜಾನಪದ ಕಲಾವಿದರ ಒಕ್ಕೂಟದ ವತಿಯಿಂದ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಯಪ್ರಕಾಶ ಗೌಡರು ಕಲಾವಿದರು ದೇಶದ ಸಂಪತ್ತು, ಕಲಾವಿದ ಉಳಿದರೆ ದೇಶದ ಸಂಸ್ಕೃತಿ ಉಳಿಯುತ್ತದೆ, ವಿದೇಶದಲ್ಲಿ ನಮ್ಮ ಜಿಲ್ಲೆಯ ಹಿರಿಮೆ ಮೆರೆದ ಕಲಾವಿದರಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಜಾನಪದ ಕಲಾಮೇಳ ಮಾಡುವ ಚಿಂತನೆಯಿದೆ, ಕಲಾವಿದರು ಒಗ್ಗಟ್ಟಾಗಬೇಕು ಕಲಾವಿದರ ಸಹಕಾರ ಸಂಘಕ್ಕೆ ಸದಸ್ಯರಾದರೆ ಭವಿಷ್ಯದಲ್ಲಿ ಸಹಾಯವಾಗುತ್ತದೆ ಎಂದರು.
ಸರಕಾರ ಸ್ಥಳೀಯ ಕಲಾವಿದರ ಹಿತ ಕಾಯಬೇಕು, ಅವರಿಗೆ ಹೆಚ್ಚು ಕಾರ್ಯಕ್ರಮ ನೀಡಿ ಬೆಳೆಸಬೇಕು ಎಂದು ಕರೆ ನೀಡಿದರು.

ಪೂಜಾಕುಣಿತ ಕಲಾವಿದರಾದ ಕೆ.ಪಿ.ದೇವರಾಜು, ಕೆ.ಬಿ. ಸ್ವಾಮಿ, ಶಂಕರ್ ಇಂಡುವಾಳು, ಸಿ.ಎಸ್ ಕುಮಾರ್, ಚಿಕ್ಕಬೋರಯ್ಯ, ಸಿದ್ದೇಗೌಡ, ವಸಂತ, ವೀರಗಾಸೆ ಕಲಾವಿದರಾದ ಗಂಗಾಧರ್ ಹೊನ್ನೇಮಡು, ಸದಾಶಿವ ಮೂರ್ತಿ, ಆರಾದ್ಯ ಗುಡಿಗೇನಳ್ಳಿ,ತಮಟೆ ಕಲಾವಿದರಾದ ದಿಲೀಪ್ ಹುಲಿವಾನ,ರಾಜು ಬೂದನೂರು, ಜನಪದ ಕಲಾವಿದರಾದ ಹೆಗ್ಗಡಹಳ್ಳಿ ಕೃಷ್ಣೇಗೌಡ, ಸಾಕಮ್ಮ ಮಲ್ಲಾನಾಯ್ಕನಕಟ್ಟೆ, ಜಯಣ್ಣ ಭೀಮನಕೆರೆ, ತೂರಯ್ಯ ತಳಗವಾದಿ, ದೇವರಾಜ್ ಕೊಪ್ಪ, ಎನ್.ಶೇಖರ್ ಹನಿಯಂಬಾಡಿ, ಹೊನ್ನೇಶ್ ಯರಹಳ್ಳಿ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ