ಮಂಡ್ಯನಗರ ಬಂದೀಗೌಡ ಬಡಾವಣೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ಬ್ಯಾಂಕಿನ 7 ದಶಕಗಳ ಸಂಸ್ಥಾಪನ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಶಿಬಿರದಲ್ಲಿ ಪಾಲ್ಗೊಂಡ ಮಂಡ್ಯ ಜಿಲ್ಲೆಯ ವಿವಿಧ ಶಾಖೆಗಳ ಸಿಬ್ಬಂದಿಗಳು 90 ಯುನಿಟ್ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ಧಾರೆ.
ಪ್ರಾದೇಶಿಕ ವ್ಯವಸ್ಥಾಪಕರಾದ ಸುಮನ ಅವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಕ್ರೆಡಿಟ್ ಮ್ಯಾನೇಜರ್ ಚೇತನ್, ಮುಖ್ಯ ವ್ಯವಸ್ಥಾಪಕ ಅಕ್ರಂ ಖಾನ್, ಡಿಪಾರ್ಟ್ ಮೆಂಟ್ ಚೀಫ್ ಮ್ಯಾನೇಜರ್ ವೀಣಾ, ಶಿವಪುರ ಶಾಖೆ ಮ್ಯಾನೇಜರ್ ವಿನಯ್ ಎಂ.ಹೆಚ್. ಎಚ್.ಆರ್. ರೂಪ್ನಾ ಹಾಗೂ ವಿಶ್ವ ಸೇರಿದಂತೆ ಹಲವರು ಭಾಗವಹಿಸಿದ್ದರು.




