Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ದ್ವಿಭಾಷಾ ನೀತಿ ಅನುಷ್ಠಾನಗೊಳಿಸಲು ಕರವೇ ಒತ್ತಾಯ

ರಾಜ್ಯದಲ್ಲಿನ ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯು ಮಂಡ್ಯ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿ ‘ಭಾಷಾ ಸಮತೋಲನಕ್ಕಾಗಿ: ಕನ್ನಡವನ್ನು ಮೊಟ್ಟಮೊದಲು ಉಳಿಸಿಕೊಂಡು, ಜೊತೆಗೆ ಇಂಗ್ಲಿಷ್ ನಂತಹ ಜಾಗತಿಕ ಭಾಷೆಯಲ್ಲಿ ಮಕ್ಕಳಿಗೆ ಸಾಧನೆಯ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಕನ್ನಡವನ್ನು ಎಲ್ಲ ಶಾಲೆಗಳಲ್ಲೂ (ಸರಕಾರಿ ಮತ್ತು ಖಾಸಗಿ) ಕಡ್ಡಾಯ ಭಾಷೆಯಾಗಿ ಕಲಿಸಲು ಕ್ರಮವಹಿಸಬೇಕು. ಕನ್ನಡ ಜೊತೆಗೆ ಇನ್ನೊಂದು ಆಯ್ಕೆಭಾಷೆಯನ್ನು ಕಲಿಸುವ ವ್ಯವಸ್ಥೆಯನ್ನು ಪಠ್ಯಪುಸ್ತಕಗಳ ಸಹಾಯದಿಂದ ಸದೃಢಗೊಳಿಸಬೇಕು. ದ್ವಿಭಾಷಾ ನೀತಿಯ ಬಗ್ಗೆ ಸ್ಪಷ್ಟ ನೀತಿನಿರ್ಧಾರ ಮತ್ತು ಅನುಷ್ಠಾನ ಚಟುವಟಿಕೆಗಳ ಪಟ್ಟಿ ಪ್ರಕಟಿಸಬೇಕೆಂದು ಆಗ್ರಹಿಸಿದರು.

ಅಂತಿಮವಾಗಿ ”ನಮ್ಮ ಕರ್ನಾಟಕ, ನಮ್ಮ ಭಾಷೆ, ನಮ್ಮ ಭವಿಷ್ಯ” ಎಂಬ ಧೈಯದೊಂದಿಗೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ರಾಜ್ಯದ ಭಾಷಾ ಗೌರವ ಕಾಪಾಡಲು ಈ ದ್ವಿಭಾಷಾ ನೀತಿಯನ್ನು ತ್ವರಿತವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಜು ಆಲಕೆರೆ, ಪ್ರವೀಣ್, ಜೋಸೆಫ್ ಹಾಗೂ ಅಭಿಷೇಕ್ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ